ಕುಂದಾಪುರ: ಅಕ್ಕನನ್ನೇ ಕೊಂದ ತಮ್ಮನಿಗೆ ಕೊನೆಗೂ ಸಿಕ್ತು ಶಿಕ್ಷೆ
ಕುಂದಾಪುರ: ಹಣ ಕೊಡಲು ಪೀಡಿಸಿದ ಸಹೋದರನು ಗಂಭೀರ ಹಲ್ಲೆ ನಡೆಸಿ ಸೋದರಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಮೇಲಿನ ಆರೋಪಣೆಗಳು ಸಾಭೀತಾಗಿದ್ದು ಆತ ದೋಷಿಯೆಂದು ತೀರ್ಮಾನಿಸಿ ಕುಂದಾಪುರದಲ್ಲಿನ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ಖಂಡೇರಿ ಶನಿವಾರ ತೀರ್ಪು ನೀಡಿದ್ದಾರೆ. ಜುಲೈ 22ರಂದು ರಾತ್ರಿ ತಾಲೂಕಿನ ವಡೇರಹೊಬಳಿ ಗ್ರಾಮದ ಕುಂದೇಶ್ವರ ದೇವಸ್ಥಾನ ಹಿಂಭಾಗದ ನಿವಾಸಿ ವಿಜಯಾ ಭಂಡಾರಿ (50) ಎನ್ನುವರು ಆಕೆ ಸೋದರ ಅಣ್ಣಪ್ಪ ಭಂಡಾರಿ (45) ಎನ್ನುವಾತ ನಡೆಸಿದ ಗಂಭೀರ ಹಲ್ಲೆಯಿಂದ ಆಸ್ಪತ್ರೆಗೆ […]