ಏಷ್ಯಾಕಪ್‌ : ಭಾರತಕ್ಕೆ 266 ರನ್​ಗಳ ಸ್ಪರ್ಧಾತ್ಮಕ ಗುರಿ

ಕೊಲಂಬೊ (ಶ್ರೀಲಂಕಾ): ನಾಯಕ ಶಕೀಬ್​ ಅಲ್​ ಹಸನ್​ ಮತ್ತು ತೌಹೀದ್ ಹೃದಯೋಯ್ ಅವರ ಅರ್ಧಶತಕದ ನೆರವಿನಿಂದ ಭಾರತದ ವಿರುದ್ಧ ಬಾಂಗ್ಲಾದೇಶ ನಿಗದಿತ 50 ಓವರ್‌ಗಳ ಅಂತ್ಯಕ್ಕೆ 8 ವಿಕೆಟ್​ ಕಳೆದುಕೊಂಡು 265 ರನ್​ ಕಲೆಹಾಕಿತು. ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಭಾರತ ಈಗಾಗಲೇ ಫೈನಲ್‌ಗೇರಿದ್ದು, ಪ್ರಮುಖ ಆಟಗಾರರಿಗೆ ವಿಶ್ರಾಂತಿ​ ನೀಡಿ ಐದು ಬದಲಾವಣೆಯೊಂದಿಗೆ ಮೈದಾನಕ್ಕಿಳಿದಿದೆ. ಬೌಲಿಂಗ್​ನಲ್ಲಿಂದು ತಂಡ ಸಾಧಾರಣ ಪ್ರದರ್ಶನ ನೀಡಿತು. ಬಾಂಗ್ಲಾ ಮೇಲೆ ಆರಂಭಿಕ ಓವರ್​ಗಳಲ್ಲಿ ಯಶ ಕಂಡ ಬೌಲರ್​ಗಳು ನಂತರ ಕೊಂಚ ಮಂಕಾದರು. ಮಧ್ಯಮ […]