ವೈಟ್ ಜರ್ಸಿಗೆ ನಿವೃತ್ತಿ ಹೇಳುವ ಸಮಯ, 2024 ರ ಟಿ20 ವಿಶ್ವಕಪ್ ಆಡುತ್ತೇನೆ ಎಂದ ಡೇವಿಡ್ ವಾರ್ನರ್
ಲಂಡನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದ ಅಭ್ಯಾಸದ ವೇಳೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಡೇವಿಡ್ ವಾರ್ನರ್ ಟೆಸ್ಟ್ ವೃತ್ತಿ ಜೀವನದ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇತ್ತೀಚೆಗೆ ರನ್ ಗಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲ ಎಂದು ಅವರ ದೇಶದ ಮಾಧ್ಯಮಗಳು ಸರಣಿ ವರದಿ ಮಾಡಿದ್ದವು. ಕಳೆದ ವರ್ಷ ಕೊನೆಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಲುವಾಗಿ ಭಾರತಕ್ಕೆ ಬಂದಿದ್ದಾಗ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಕ್ಕಾಗಿ ಮತ್ತೆ ಟೀಕೆಗೆ ಒಳಗಾಗಿದ್ದರು. ಈಗ ಸ್ವತಃ ಅವರೇ ನಿವೃತ್ತಿಯ ಬಗ್ಗೆ […]