ಕ್ರಿಯೇಟಿವ್ ಕಾಲೇಜಿನ ಉಪನ್ಯಾಸಕ ಲೇಖಕ ಬಿ ರಾಘವೇಂದ್ರ ರಾವ್ ಅವರ 56ನೇ ಕೃತಿ “ಹಾವಿನ ಮನೆ” ಬಿಡುಗಡೆ
ರಾಘವೇಂದ್ರ ರಾವ್ ಅವರು ಈಗಾಗಲೇ 55 ಕೃತಿಗಳನ್ನು ಪೂರೈಸಿದ್ದು, 56ನೇ ಕೃತಿ “ಹಾವಿನ ಮನೆ” ಪತ್ತೆದಾರಿ ಕಾದಂಬರಿ ಇತ್ತೀಚೆಗೆ ಬೆಂಗಳೂರಿನ ರಮಣಶ್ರೀ ಹೋಟೇಲಿನಲ್ಲಿ ವೀರಲೋಕ ಪ್ರಕಾಶನದ ವಾರ್ಷಿಕೋತ್ಸವದ ಸುಸಂದರ್ಭದಲ್ಲಿ ಲೋಕಾರ್ಪಣೆಗೊಂಡಿತು. ಈ ಕಾರ್ಯಕ್ರಮದಲ್ಲಿ ಶಿವಾಜಿ ಸುರತ್ಕಲ್ ಚಲನಚಿತ್ರ ಖ್ಯಾತಿಯ ನಿರ್ದೇಶಕರಾದ ಆಕಾಶ್ ಶ್ರೀವತ್ಸ ಅವರು ಬಿಡುಗಡೆಗೊಳಿಸಿದರು. ಕನ್ನಡ ಸಾಹಿತ್ಯಕ್ಕೆ ಪತ್ತೆದಾರಿ ಸಾಹಿತ್ಯದ ಅಗತ್ಯವಿದೆ. ಅದಕ್ಕೆ ಬಹುದೊಡ್ಡ ಓದುಗ ವರ್ಗವಿದೆ. ಈ ನಿಟ್ಟಿನಲ್ಲಿ ರಾಘವೇಂದ್ರ ರಾವ್ (ಅನು ಬೆಳ್ಳೆ) ಅವರ ʼಹಾವಿನ ಮನೆʼ ಮಹತ್ವದ ಕೃತಿಯಾಗಬಲ್ಲದು ಎಂದು ಅಭಿಪ್ರಾಯಪಟ್ಟರು. […]