ಹೃದಯ ಸ್ತಂಭನ ಸಮಯದಲ್ಲಿ ಸಿಪಿಆರ್ ನೀಡಿ ವ್ಯಕ್ತಿಯ ಜೀವ ಉಳಿಸಿ: ಸಿಪಿಆರ್ ನೀಡುವ ವಿಧಾನದ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಗಳು ಸಾಮಾನ್ಯವೆಂಬಂತಾಗಿದ್ದು, ಬಾಳಿ ಬದುಕಬೇಕಾಗಿರುವ ಎಳೆ ಜೀವಗಳು ತರಗೆಲೆಗಳಂತೆ ಧರೆಗುರುಳುತ್ತಿರುವ ದೃಶ್ಯಗಳು ಎಲ್ಲೆಲ್ಲೂ ಕಂಡುಬರುತ್ತಿದೆ. ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ಹತ್ತಿರದಲ್ಲೇ ವ್ಯಕ್ತಿಗಳಿದ್ದರೂ ಈ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕುನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗಾಬರಿಯಾಗದೆ ಹೃದಯ ಸ್ತಂಭನವಾದ ವ್ಯಕ್ತಿಗೆ ತಕ್ಷಣ ಸಿಪಿಆರ್ ನೀಡಿದಲ್ಲಿ ವ್ಯಕ್ತಿಯ ಪ್ರಾಣ ಉಳಿಸಬಹುದು. ಸಿಪಿಆರ್ ಎಂದರೇನು ಮತ್ತು ನಾವು ಅದನ್ನು ಯಾವಾಗ ಬಳಸಬೇಕು? ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಎನ್ನುವುದು ತುರ್ತು ವಿಧಾನವಾಗಿದ್ದು, ಉಸಿರಾಟ […]