ಕಾರ್ಕಳ: ಸಂಶಯಾಸ್ಪದ ರೀತಿಯಲ್ಲಿ ಜಾನುವಾರುಗಳ ಸಾವು…!

ಕಾರ್ಕಳ : ಸಂಶಯಾಸ್ಪದ ರೀತಿಯಲ್ಲಿ ಜಾನುವಾರು ಮೃತಪಟ್ಟ ಘಟನೆ ತಾಲೂಕಿನ ಸಾಣೂರು ಗ್ರಾಮದ ಮುರತ್ತಂಗಡಿ ಎಂಬಲ್ಲಿ ಮಂಗಳವಾರ ಸಂಭವಿಸಿದೆ. ಸ್ಥಳೀಯ ಚಿಕ್ಕಬೆಟ್ಟು ನಿವಾಸಿ ಲಲಿತ ಎಂಬವರಿಗೆ ಸೇರಿದ ಒಂದು ಹಸು ಹಟ್ಟಿಯಲ್ಲಿ ಸಾವನ್ನಪ್ಪಿದರೆ, ಇನ್ನೊಂದು ಹಸು ಗಂಭೀರ ಅವಸ್ಥೆಯಲ್ಲಿ ಜೀವನ್ಮರಣ ಹೋರಾಟ ಮಾಡುತ್ತಿದೆ. ಕಳೆದ ಅ.೬ರಂದು ಮನೆಯಿಂದ ಹೊರಗೆ ಮೇಯಲು ಬಿಟ್ಟಿದ್ದರು. ಬಳಿಕ ಅನಾರೋಗ್ಯಕ್ಕೀಡಾಗಿ ಸಾವನ್ನಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಷ ಪೂರಿತ ನೀರನ್ನು ಸೇವಿಸಿ ಸಾವನ್ನಪ್ಪಿರಬಹುವುದು ಎನ್ನುವ ಸಂದೇಹವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದಾರೆ.