ಶುರುವಾಯ್ತು ಕೋವಿಡ್ ಲಸಿಕೆಯ ಮಾನವ ಪ್ರಯೋಗ

ನವದೆಹಲಿ: ದೇಶದಲ್ಲಿ ಕೊರೊನಾ ದಿನೇ ದಿನೇ ಹರಡುತ್ತಿರುವ ಹಿನ್ನೆಲೆ, ದೇಶದಲ್ಲಿ ಅಭಿವೃದ್ಧಿಪಡಿಸಲಾದ ಎರಡು ಲಸಿಕೆ ಮಾನವನ ಮೇಲೆ ‍ಪ್ರಯೋಗ ಆರಂಭಿಸಿದೆ. ಸುಮಾರು 1,000 ಜನ ಸ್ವ-ಇಚ್ಚೆಯಿಂದ ಲಸಿಕೆ ಪ್ರಯೋಗಕ್ಕೆ ಮುಂದಾಗಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ. ಜಗತ್ತಿನಲ್ಲೇ ಭಾರತ ಅತಿಹೆಚ್ಚು ಲಸಿಕೆ ತಯಾರಿಸುತ್ತಿದ್ದು, ಕೊರೊನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯು ನಡೆಸಬೇಕಾಗಿರುವುದು ದೇಶದ ಜವಾಬ್ದಾರಿಯೂ ಆಗಿದೆ ಎಂದು ಐಸಿಎಂಆರ್ ನಿರ್ದೇಶಕ ಡಾ. ಬಲರಾಂ ಭಾರ್ಗವ ಹೇಳಿದ್ದಾರೆ. ಒಂದನೇ ಲಸಿಕೆ […]