ನಾಲ್ಕನೇ ಅಲೆ ಭೀತಿ: ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣ, ಕಳೆದ 24 ಗಂಟೆಗಳಲ್ಲಿ 33 ಸಾವು
ನವದೆಹಲಿ: ಭಾರತದಲ್ಲಿ 2,527 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ, ಕಳೆದ 24 ಗಂಟೆಗಳಲ್ಲಿ 33 ಸಾವುಗಳು, ಒಟ್ಟು ಸಾವಿನ ಸಂಖ್ಯೆಯನ್ನು 5,22,149 ಕ್ಕೆ ಏರಿಸಿದೆ ಎಂದು ಆರೋಗ್ಯ ಸಚಿವಾಲಯವು ಮಾಹಿತಿ ಬಿಡುಗಡೆ ಮಾಡಿದೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 15,079. ದೇಶವು ಒಂದು ದಿನದಲ್ಲಿ 1,656 ಚೇತರಿಕೆ ದಾಖಲಿಸಿದ್ದು, ಒಟ್ಟು ಚೇತರಿಕೆಯ ಸಂಖ್ಯೆ 4,25,17,724. ದೇಶಾದ್ಯಂತ ಅದರಲ್ಲೂ ವಿಶೇಷವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ದಾಖಲಾಗುತ್ತಿದ್ದರೂ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾಗುವವರ ಸಂಖ್ಯೆ […]
ಅಂತಿಮ ಹಂತದಲ್ಲಿವೆ ಕೋವೊವಾಕ್ಸ್ ಲಸಿಕಾ ಪ್ರಯೋಗಗಳು: 18 ವರ್ಷ ಕೆಳಗಿನ ಮಕ್ಕಳಿಗೆ ಜೂನ್ ವರೆಗೆ ದೊರೆಯಬಹುದು ಲಸಿಕೆ
ದೆಹಲಿ: 18 ವರ್ಷ ಮೇಲ್ಪಟ್ಟವರಿಗೆಲ್ಲ ಈಗಾಗಲೇ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಲಸಿಕೆಗಳನ್ನು ನೀಡಲಾಗಿದ್ದು, ಪುಟಾಣಿ ಮಕ್ಕಳಿಗೆ ಇನ್ನೂ ಲಸಿಕೆಗಳನ್ನು ನೀಡಲಾಗಿಲ್ಲ. ಚಿಕ್ಕ ಮಕ್ಕಳಲ್ಲಿ ಕೋವಿಡ್ ವಿರುದ್ದದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸಲಾಗುತ್ತಿದೆ. ಲಸಿಕೆಗಳನ್ನು ಪ್ರಾಯೋಗಿಕ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತಿದ್ದು, ಮಕ್ಕಳ ಮೇಲೆ ವೈದ್ಯಕೀಯ ಪ್ರಯೋಗಗಳನ್ನು ಕೈಗೊಳ್ಳಲಾಗುತ್ತಿದೆ. ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಯು ಕೋವೊವಾಕ್ಸ್ ಲಸಿಕೆಗಳನ್ನು ತಯಾರಿಸುವ ಹೊಣೆ ಹೊತ್ತಿದೆ. ಅಮೇರಿಕಾದ ಜೈವಿಕ ತಂತ್ರಜ್ಞಾನ ಸಂಸ್ಥೆಯು ಅಭಿವೃದ್ದಿ ಪಡಿಸಿರುವ ನೋವೋವಾಕ್ಸ್ (ಮರುಸಂಯೋಜಕ ನ್ಯಾನೊಪಾರ್ಟಿಕಲ್ […]