ಐಪಿಸಿ, ಸಿ.ಆರ್.ಪಿ. ಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲಾವಣೆ: ಲೋಕಸಭೆಯಲ್ಲಿ ಮಸೂದೆ ಪರಿಚಯಿಸಿದ ಕೇಂದ್ರ

ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (Evidence Act)ಯನ್ನು  ಬದಲಿಸಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕೆಳಗಿನ ಮಸೂದೆಗಳನ್ನು ಮಂಡಿಸಿದರು ಭಾರತೀಯ ನ್ಯಾಯ ಸಂಹಿತಾ, 2023 (ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದರ ಪ್ರಾಸಂಗಿಕ ವಿಷಯಗಳಿಗೆ) ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, […]

50 ವರ್ಷಗಳ ನಂತರ ದಂಪತಿಯನ್ನು ಮತ್ತೆ ಒಂದಾಗಿಸಿದ ಲೋಕ ಅದಾಲತ್: ಒಂದೇ ದಿನದಲ್ಲಿ 7.65 ಲಕ್ಷ ಪ್ರಕರಣಗಳ ಇತ್ಯರ್ಥ

ಬೆಂಗಳೂರು: ಇತ್ತೀಚಿಗೆ ಆಯೋಜಿಸಲಾದ ಲೋಕ ಅದಾಲತ್‌ಗಳಲ್ಲಿ 50 ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿಗಳನ್ನು ಮತ್ತೆ ಒಂದು ಮಾಡಲಾಗಿದೆ. ಕಲಘಟಗಿಯ ಸಿವಿಲ್ ನ್ಯಾಯಾಧೀಶರ ಹಿರಿಯ ವಿಭಾಗದ ಲೋಕ ಅದಾಲತ್‌ನಲ್ಲಿ 80 ವರ್ಷದ ಪತ್ನಿ ಮತ್ತು 85 ವರ್ಷದ ಪತಿ ರಾಜಿ ಮಾಡಿಕೊಂಡಿದ್ದಾರೆ. ಸಂಧಾನದ ನಂತರ, ಎರಡೂ ಪಕ್ಷಗಳು ಪುನರ್ಮಿಲನದ ಮೂಲಕ ವಿಷಯವನ್ನು ಇತ್ಯರ್ಥಪಡಿಸಿದವು. ಒಟ್ಟಾರೆಯಾಗಿ 1,128 ವೈವಾಹಿಕ ವಿವಾದಗಳನ್ನು ಇತ್ಯರ್ಥಗೊಳಿಸಲಾಗಿದ್ದು, ಸಮನ್ವಯದ ಕಾರಣದಿಂದಾಗಿ 107 ಜೋಡಿಗಳು ಮತ್ತೆ ಒಂದಾಗಿದ್ದಾವೆ ಎಂದು ರಾಷ್ಟ್ರೀಯ ಲೋಕ ಅದಾಲತ್ ನ ಮುಖ್ಯ ನ್ಯಾಯಾಧೀಶ […]