ಐಪಿಸಿ, ಸಿ.ಆರ್.ಪಿ. ಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ ಬದಲಾವಣೆ: ಲೋಕಸಭೆಯಲ್ಲಿ ಮಸೂದೆ ಪರಿಚಯಿಸಿದ ಕೇಂದ್ರ

ನವದೆಹಲಿ: ಭಾರತೀಯ ದಂಡ ಸಂಹಿತೆ (IPC), ಅಪರಾಧ ಪ್ರಕ್ರಿಯಾ ಸಂಹಿತೆ (CrPC) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ (Evidence Act)ಯನ್ನು  ಬದಲಿಸಲು ಕೇಂದ್ರ ಸರ್ಕಾರ ಇಂದು ಲೋಕಸಭೆಯಲ್ಲಿ ಮೂರು ಮಸೂದೆಗಳನ್ನು ಮಂಡಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕೆಳಗಿನ ಮಸೂದೆಗಳನ್ನು ಮಂಡಿಸಿದರು

Image

ಭಾರತೀಯ ನ್ಯಾಯ ಸಂಹಿತಾ, 2023 (ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದರ ಪ್ರಾಸಂಗಿಕ ವಿಷಯಗಳಿಗೆ)

ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ, 2023 (ಅಪರಾಧಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಕ್ರೋಢೀಕರಿಸಲು ಮತ್ತು ತಿದ್ದುಪಡಿ ಮಾಡಲು ಮತ್ತು ಅದಕ್ಕೆ ಸಂಬಂಧಿಸಿದ ಅಥವಾ ಅದರ ಪ್ರಾಸಂಗಿಕ ವಿಷಯಗಳಿಗೆ)

ಭಾರತೀಯ ಸಾಕ್ಷಿ ಮಸೂದೆ, 2023 (ನ್ಯಾಯಯುತ ವಿಚಾರಣೆಗಾಗಿ ಸಾಮಾನ್ಯ ನಿಯಮಗಳು ಮತ್ತು ಸಾಕ್ಷ್ಯದ ತತ್ವಗಳನ್ನು ಕ್ರೋಢೀಕರಿಸಲು ಮತ್ತು ಒದಗಿಸಲು)

ವ್ಯವಹಾರದ ಪೂರಕ ಪಟ್ಟಿಯಲ್ಲಿ ಪರಿಚಯಿಸಲು ಈ ಮಸೂದೆಗಳನ್ನು ಪಟ್ಟಿ ಮಾಡಲಾಗಿದೆ. ಮೂರು ಮಸೂದೆಗಳನ್ನು ಮಂಡಿಸಿದ ನಂತರ, ಅವುಗಳನ್ನು ಗೃಹ ವ್ಯವಹಾರಗಳ ಸ್ಥಾಯಿ ಸಮಿತಿಗೆ ಉಲ್ಲೇಖಿಸಲಾಯಿತು.

ಐಪಿಸಿ, ಸಿ.ಆರ್.ಪಿ. ಸಿ ಮತ್ತು ಇಂಡಿಯನ್ ಎವಿಡೆನ್ಸ್ ಆಕ್ಟ್ 1872 ಅನ್ನು ಪರಿಷ್ಕರಿಸಲು ಸಲಹೆಗಳನ್ನು ನೀಡಲು ಕೇಂದ್ರ ಸರ್ಕಾರವು ಕ್ರಿಮಿನಲ್ ಕಾನೂನು ಸುಧಾರಣಾ ಸಮಿತಿಯನ್ನು ಮಾರ್ಚ್ 2020 ರಲ್ಲಿ ರಚಿಸಿತ್ತು. ಈ ಸಮಿತಿಯು ದೆಹಲಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ಅಂದಿನ ವಿಸಿ ಪ್ರೊಫೆಸರ್ ಡಾ ರಣಬೀರ್ ಸಿಂಗ್ ಅವರ ನೇತೃತ್ವ ಮತ್ತು ಪ್ರೊಫೆಸರ್ ಡಾ.ಜಿಎಸ್ ಬಾಜಪೈ, ಎನ್‌ಎಲ್‌ಯು-ಡಿ ಆಗಿನ ರಿಜಿಸ್ಟ್ರಾರ್, ಪ್ರೊಫೆಸರ್ ಡಾ.ಬಾಲರಾಜ್ ಚೌಹಾಣ್ ಡಿಎನ್‌ಎಲ್‌ಯುನ ವಿಸಿ, ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಮತ್ತು ಜಿಪಿ ಥರೇಜಾ ಮಾಜಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು, ದೆಹಲಿ ಇವರನ್ನು ಒಳಗೊಂಡಿತ್ತು. ಸಮಿತಿಯು ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಿತ್ತು ಮತ್ತು ಕಳೆದ ವರ್ಷ ಫೆಬ್ರವರಿಯಲ್ಲಿ ವರದಿ ಸಲ್ಲಿಸಿತ್ತು.

ಏಪ್ರಿಲ್ 2022 ರಲ್ಲಿ, ಈ ಮಸೂದೆಯನ್ನು ಸಂಸತ್ತಿನಲ್ಲಿ ಶೀಘ್ರವೆ ಮಂಡಿಸಲಾಗುವುದು ಎಂದು ಕಾನೂನು ಸಚಿವಾಲಯವು ರಾಜ್ಯಸಭೆಗೆ ತಿಳಿಸಿತ್ತು.