ಬ್ರಹ್ಮಾವರ ಖಾಯಂ ನ್ಯಾಯಾಲಯ ಆರಂಭಗೊಂಡಿರುವುದು ಸಂತಸ ತಂದಿದೆ: ಶಿರಿಯಾರ ಪ್ರಭಾಕರ್ ನಾಯಕ್

ಉಡುಪಿ: ಜನತೆಯ ಪರವಾಗಿ ಸಾರ್ವಜನಿಕರಿಗೆ ಅತೀ ಹತ್ತಿರ ತಾಲೂಕು ಮಟ್ಟದ ನ್ಯಾಲಯ ಅತೀ ಅಗತ್ಯವೆಂದು ಪರಿಗಣಿಸಿ ಬೈಂದೂರು, ಬ್ರಹ್ಮಾವರ ಹಾಗೂ ಮುಂದೆ ಕಾಪು ನ್ಯಾಯಾಲಯ ಉದ್ಘಾಟನೆಯಾಗುವ ಸಾಧ್ಯತೆ ಇದೆ ಎಂದು ಹಿರಿಯ ನ್ಯಾಯವಾದಿ ಮತ್ತು ನೋಟರಿ ಶಿರಿಯಾರ ಕಲ್ಮರ್ಗಿ ಪ್ರಭಾಕರ್ ನಾಯಕ್ ತಿಳಿಸಿದ್ದಾರೆ. ಗ್ರಾಮಾಭಿವೃದ್ಧಿ, ದೇಶ ಪ್ರಗತಿ ಹೊಂದಲು ನ್ಯಾಯಾಲಯವು ಜನರ ಬಳಿಗೆ ತಲುಪುವುದು ಅತೀ ಅಗತ್ಯ ಎಂದು ಮನಗೊಂಡು ಭಾರತ ಸರ್ಕಾರವು ನ್ಯಾಯಾಂಗ ವ್ಯವಸ್ಥೆಯನ್ನು ಸರಿಪಡಿಸುವುದು ಸೂಕ್ತ ಕ್ರಮ ಎಂದು ಭಾವಿಸಿದೆ. ಉಡುಪಿ ಜಿಲ್ಲೆಯಲ್ಲಿ ಬೈಂದೂರು, […]

ಸುಳ್ಳು ದಾಖಲೆ ಸೃಷ್ಟಿಸಿ ಪಾಸ್ ಪೋರ್ಟ್ ರಚಿಸಿ ವಂಚಿಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪಾಸ್‌ಪೋರ್ಟ್ ಗಳನ್ನು ಹೊಂದಿ ಸರ್ಕಾರಕ್ಕೆ ವಂಚಿಸಿದ ಆರೋಪಿಗಳಿಗೆ ನಗರದ ಪ್ರಧಾನ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. ಪಲಿಮಾರು ಗ್ರಾಮದ ರಾಖಿ ವಿನ್‌ಸೆಂಟ್ ಡಿ ಸೋಜಾ ಎಂಬಾತನು ತನ್ನ ಅಣ್ಣನಾದ ಪಿಯೂಶ್ ಆಗಸ್ಟಿನ್ ಡಿ ಸೋಜರವರ ಹೆಸರನ್ನು ದುರ್ಬಳಕೆ ಮಾಡಿ, ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ತನ್ನದೇ ಭಾವಚಿತ್ರ ಹಾಗೂ ಬೇರೆ ಬೇರೆ ಹೆಸರು ಮತ್ತು ವಿಳಾಸದ ಪಾಸ್‌ಪೋರ್ಟ್ಗಳನ್ನು ಹೊಂದಿದ್ದು, ಸದ್ರಿ ಪಾಸ್‌ಪೋರ್ಟ್ಗಳನ್ನು ಹೊಂದಲು ಪಾವುಲ್ ಡಿಸೋಜಾ […]

ಅಜಾನ್‌ಗಾಗಿ ಧ್ವನಿವರ್ಧಕ ಬಳಸುವುದು ಮೂಲಭೂತ ಹಕ್ಕಲ್ಲ: ಅಲಹಾಬಾದ್ ಹೈಕೋರ್ಟ್

ಉತ್ತರ ಪ್ರದೇಶ: ಉತ್ತರ ಪ್ರದೇಶದ ಬದೌನ್‌ನಲ್ಲಿರುವ ಮಸೀದಿಯಲ್ಲಿ ಅಜಾನ್‌ಗಾಗಿ ಧ್ವನಿವರ್ಧಕಗಳ ಬಳಕೆಗೆ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿದ ಅಲಹಾಬಾದ್ ಹೈಕೋರ್ಟ್, ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಮೂಲಭೂತ ಹಕ್ಕಲ್ಲ ಎಂಬ ಕಾನೂನನ್ನು ಈಗ ಇತ್ಯರ್ಥಗೊಳಿಸಲಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಗಮನಿಸಿದೆ. ಅಜಾನ್ ಸಮಯದಲ್ಲಿ ಗ್ರಾಮದ ಮಸೀದಿಯಲ್ಲಿ ಧ್ವನಿವರ್ಧಕ / ಮೈಕ್ರೊಫೋನ್ ಬಳಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ಬದೌನ್‌ನಲ್ಲಿರುವ ಬಿಸೌಲಿ ತಹಸಿಲ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ತಿರಸ್ಕರಿಸಿದ್ದಾರೆ ಎಂದು ಇರ್ಫಾನ್ ಎಂಬಾತ ಅರ್ಜಿ ಸಲ್ಲಿಸಿದ್ದರು. ಎಸ್‌ಡಿಎಂ ನೀಡಿದ […]

ಜೂ.25 ರಂದು ಮೆಗಾ ಲೋಕ್ ಅದಾಲತ್

ಉಡುಪಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಇವರ ವತಿಯಿಂದ ರಾಜ್ಯಾದ್ಯಂತ ಜೂನ್ 25 ರಂದು ಇ-ಲೋಕ ಅದಾಲತ್/ ಮೆಗಾ ಲೋಕ್ ಅದಾಲತ್‌ ಅನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ತಮ್ಮ ವ್ಯಾಜ್ಯ ಪೂರ್ವ ಹಾಗೂ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಮೆಗಾ ಲೋಕ್ ಅದಾಲತ್ ಮೂಲಕ ತಕ್ಷಣ ಪರಿಹಾರ ಕಂಡುಕೊಳ್ಳಬಹುದಾಗಿದೆ. ಅದಾಲತ್‌ನಲ್ಲಿ ಸಾರ್ವಜನಿಕರು ರಾಜಿಯಾಗಬಲ್ಲ ಅಪರಾಧಿಕ ಪ್ರಕರಣ, ಬ್ಯಾಂಕ್ ಸಾಲ ವಸೂಲಾತಿ ಪ್ರಕರಣ, ಉದ್ಯೋಗದಲ್ಲಿ ಪುನರ್ ಸ್ಥಾಪಿಸಲ್ಪಡುವ ಪ್ರಕರಣ, ಕೈಗಾರಿಕಾ ಕಾರ್ಮಿಕರ ವೇತನಕ್ಕೆ ಸಂಬಂಧಿಸಿದ ಕ್ಲೇಮುಗಳು, ಜಿಲ್ಲಾ […]

ನಿರ್ಲಕ್ಷ್ಯತನದಿಂದ ಬಸ್ ಚಲಾಯಿಸಿ ಸಾವು : ಆರೋಪಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ

ಉಡುಪಿ: ಅತೀ ವೇಗ, ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯಿಂದ ಬಸ್ಸನ್ನು ಚಲಾಯಿಸಿ, ಅಪಘಾತಪಡಿಸಿ, ಸಾವಿಗೆ ಕಾರಣವಾದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2017 ಜನವರಿ 09 ರಂದು ಬೆಳಗ್ಗೆ 5.20 ಸುಮಾರಿಗೆ ಉಡುಪಿ ತಾಲೂಕು ಪುತ್ತೂರು ಗ್ರಾಮದ ಸಂತೆಕಟ್ಟೆ ಹೈವೆ ಗ್ಯಾರೇಜ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಭಾಕರ ಎಂಬಾತನು ಕೆನರಾ ಟೂರಿಸ್ಟ್ ಬಸ್ಸನ್ನು ನಿರ್ಲಕ್ಷ್ಯತನದಿಂದ ಚಲಾಯಿಸಿ, ರಸ್ತೆ ಬದಿ ನಿಂತಿದ್ದ ನಾಗರಾಜ ಎಂಬಾತನಿಗೆ ಢಿಕ್ಕಿ ಹೊಡೆದ […]