ಕೋಟದ ಹೋಟೆಲ್ ಸಿಬ್ಬಂದಿ ಸಹಿತ 9 ಮಂದಿಗೆ ಕೊರೊನಾ ಸೋಂಕು ದೃಢ
ಕೋಟ: ಕೋಟದಲ್ಲಿ ಹೋಟೆಲ್ ಸಿಬ್ಬಂದಿ, ದಿನಸಿ ಅಂಗಡಿ ಮಾಲೀಕನ ಕುಟುಂಬ ಸಹಿತ ಒಟ್ಟು 9 ಮಂದಿಗೆ ಇಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಜುಲೈ 1ರಂದು ಕೋಟದ ಹೋಟೆಲ್ ಮಾಲೀಕರಿಗೆ ಸೋಂಕು ಕಾಣಿಸಿಕೊಂಡಿತ್ತು. ಇದೀಗ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಐದು ಮಂದಿಗೂ ಸೋಂಕು ದೃಢಪಟ್ಟಿದೆ. ಹಾಗೆ ಅಂಗಡಿಯೊಂದರ ಮಾಲೀಕನ ಕುಟುಂಬದ ನಾಲ್ವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರೆಲ್ಲರಿಗೂ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಂಗಡಿ ಹಾಗೂ ಮಾಲೀಕನ ಮನೆ, ಹೋಟೆಲ್ ಕಾರ್ಮಿಕರ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದೆ.