ಉಡುಪಿ: ಹೊಸದಾಗಿ 30 ಮಂದಿ ಕೊರೊನಾ ಶಂಕಿತರು ಪತ್ತೆ
ಉಡುಪಿ: ಜಿಲ್ಲೆಯಲ್ಲಿ ಮತ್ತೆ 30 ಮಂದಿ ಕೊರೊನಾ ಶಂಕಿತರನ್ನು ಗುರುತಿಸಲಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಡಿಎಚ್ ಒ ಡಾ. ಸುಧೀರ್ ಚಂದ್ರ ಸೂಡಾ ತಿಳಿಸಿದ್ದಾರೆ. 30 ಶಂಕಿತರ ಪೈಕಿ 28 ಮಂದಿ ಪಾಸಿಟಿವ್ ಸಂಪರ್ಕದಲ್ಲಿದ್ದವರಾಗಿದ್ದು, ಒಬ್ಬ ವ್ಯಕ್ತಿಯಲ್ಲಿ ಕೊರೊನಾ ಲಕ್ಷಣ ಕಾಣಿಸಿಕೊಂಡಿದೆ. ಮತ್ತೊಬ್ಬ ವ್ಯಕ್ತಿ ಸ್ಥಳೀಯನಾಗಿದ್ದಾನೆ ಎಂದು ಹೇಳಿದ್ದಾರೆ. 41 ಮಂದಿಯ ವೈದ್ಯಕೀಯ ವರದಿ ಬರಲು ಬಾಕಿಯಿದೆ. ಈವರೆಗೆ ಜಿಲ್ಲೆಯಲ್ಲಿ ಮೂವರು ಕೊರೊನಾ ಪಾಸಿಟಿವ್ ರೋಗಿಗಳು ಪತ್ತೆಯಾಗಿದ್ದಾರೆ.