ಕೊರೋನಾ ನಿಯಂತ್ರಣ: ಕಟ್ಟಡ ಕಾರ್ಮಿಕರಿಗೆ ಮಾಸ್ಕ್ ವಿತರಣೆ
ಉಡುಪಿ ಮಾ.26: ಕಾರ್ಮಿಕ ಇಲಾಖೆ ಉಡುಪಿ, ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಉಡುಪಿ ಘಟಕದ ವತಿಯಿಂದ , ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗೆ , ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಮತ್ತು ಸೋಪುಗಳನ್ನು ಬುಧವಾರ ವಿತರಿಸಲಾಯಿತು. ಪ್ರಥಮ ಹಂತದಲ್ಲಿ ಉಡುಪಿಯ ಬೀಡಿನಗುಡ್ಡೆಯ ಲೇಬರ್ ಕಾಲೋನಿ ಹಾಗೂ ಸುತ್ತಮುತ್ತಲಿದ್ದ 500 ಮಂದಿ ಕಾರ್ಮಿಕರಿಗೆ ಪ್ರತಿ ಮನೆಗೆ 1 ಮಾಸ್ಕ್ ಮತ್ತು 2 ಸೋಪುಗಳನ್ನು ಹಾಗೂ ಕೊರೋನಾ ನಿಯಂತ್ರಣ ಕುರಿತ ಮುನ್ನೆಚ್ಚರಿಕಾ ಕ್ರಮಗಳ ಕುರಿತ ಕರಪತ್ರಗಳನ್ನು ವಿತರಿಸಲಾಗಿದ್ದು, ಜಿಲ್ಲೆಯಲ್ಲಿನ ಎಲ್ಲಾ ಕಟ್ಟಡ […]