ಸುಖವೂ ಉಂಟು, ದುಃಖವೂ ಉಂಟು: ಕೊರೋನಾ ಕಲಿಸಿದ ಪಾಠ ನೂರೆಂಟು
♠ ರಂಜಿತ್ ಸಸಿಹಿತ್ಲು ಈ ಕೊರೋನಾ ಎನ್ನುವ ಮಹಾಮಾರಿ ಇದೆಯಲ್ವಾ ವಿಶ್ವದ ಅದೆಷ್ಟೋ ದೇಶಗಳನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಹಿಂಡಿಹಿಪ್ಪೆಕಾಯಿ ಮಾಡಿದೆ. ಅದೆಷ್ಟೋ ಜನರ ಉಸಿರನ್ನೇ ಹೀರಿ ಬಿಟ್ಟಿದೆ. ವಾಣಿಜ್ಯ ವ್ಯವಹಾರ ಶೈಕ್ಷಣಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರಿದೆ. ಇದೆಲ್ಲದರ ನಡುವೆಯೂ ಪ್ರತಿಯೊಂದು ಒಳ್ಳೆಯದರಲ್ಲೂ ಕೆಟ್ಟದು, ಪ್ರತಿಯೊಂದು ಕೆಟ್ಟದರಲ್ಲೂ ಒಳ್ಳೆಯ ಸಂಗತಿಗಳು ಇರುತ್ತೆ ಅನ್ನುತ್ತಾರಲ್ಲ ಹಾಗೆಯೇ ಈ ಕೊರೊನದಿಂದಲೂ ಕೆಲವೊಂದು ಒಳ್ಳೆಯ ಬೆಳವಣಿಗೆಗಳೇ ಆಯಿತೇನೋ ಅನ್ನಿಸುತ್ತಿದೆ. ಮನುಷ್ಯ ಭೂಮಿ ಮೇಲಿರುವ ಅತ್ಯಂತ ಕ್ರೀಯಾಶೀಲ ಪ್ರಾಣಿ,ತನ್ನ ಔದ್ಯೋಗಿಕ […]