ದ.ಕ. ಜಿಲ್ಲೆ: ಇಂದು 89  ಮಂದಿಗೆ ಕೊರೋನಾ ಪಾಸಿಟಿವ್: ಎರಡಂಕಿಗೆ ಇಳಿದ ಪಾಸಿಟಿವ್ ಸಂಖ್ಯೆ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಇಂದು 89  ಮಂದಿಗೆ ಕೊರೋನಾ ಪಾಸಿಟಿವ್ ದೃಡಪಟ್ಟಿದ್ದು, ಕಳೆದ ಒಂದು ವಾರದ ಬಳಿಕ ಇಂದು ಜಿಲ್ಲೆಯಲ್ಲಿ ಕೊಂಚ ಇಳಿಮುಖ ಕಂಡಿದೆ.‌ ಇಂದು ಪಾಸಿಟಿವ್ ಕಂಡುಬಂದ ಪೈಕಿ ILI – 45 ಮಂದಿಗೆ, SARI ಪ್ರಕರಣದಿಂದ 16, ಸಂಪರ್ಕವೇ ಪತ್ತೆಯಾಗದ 15 ಮಂದಿಗೆ ಕೊರೋನಾ ಪಾಸಿಟಿವ್ ಹಾಗೂ ಪ್ರಾಥಮಿಕ ಸಂಪರ್ಕದಿಂದ 11 ಮಂದಿ, ವಿದೇಶದಿಂದ ಬಂದ ಇಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.