ಬೆಳ್ತಂಗಡಿ ತಾಲೂಕಿನ ಕರಾಯದ ವ್ಯಕ್ತಿಗೆ ಕೊರೊನ ದೃಢ: ದ.ಕ.‌ಜಿಲ್ಲೆಯಲ್ಲಿ‌ ಮತ್ತೊಂದು ಕೊರೊನಾ ಪಾಸಿಟಿವ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೊಂದು ಕೊರೊನಾ ದೃಢಪಟ್ಟಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಈ ವ್ಯಕ್ತಿ‌ ಮಾ. 21ರಂದು ದುಬೈಯಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದು, ಬೆಂಗಳೂರಿನಿಂದ KSRTC ಬಸ್ ಮೂಲಕ ಸ್ವಗ್ರಾಮ ತಲುಪಿದ್ದರು. ಅನಾರೋಗ್ಯ ಕಾರಣದಿಂದ 24ರಂದು ಪುತ್ತೂರಿನ ಆಸ್ಪತ್ರೆ ದಾಖಲಾಗಿದ್ದು, ಗಂಟಲು ಸ್ರಾವ ತಪಾಸಣೆಗೆ ರವಾನೆ ಮಾಡಲಾಗಿತ್ತು. ಇಂದು ವರದಿಯಂತೆ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಕೊರೊನಾ ಪೀಡಿತನಿಗೆ ತೀವ್ರ […]