ಮಂಗಳೂರು: ಕೊರೊನಾಗೆ ದ.ಕ. ಜಿಲ್ಲೆಯಲ್ಲಿ ಮತ್ತೊಂದು ಬಲಿ; ಬೆಳ್ತಂಗಡಿ ಮೂಲದ ವ್ಯಕ್ತಿ ಸಾವು

ಮಂಗಳೂರು: ಮಹಾಮಾರಿ ಕೊರೊನಾಗೆ ಮಂಗಳೂರಿನಲ್ಲಿ ಮತ್ತೊಂದು ಬಲಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ವ್ಯಕ್ತಿ ಬಲಿಯಾಗಿದ್ದು, ಅವರು ವೆನ್ಲಾಕ್ ಆಸ್ಪತ್ರೆಗೆ ಬಂದ ದಾಖಲಾದ ಅನಂತರ ಸಾವನ್ನಪ್ಪಿದ್ದಾರೆ. ಬಳಿಕ ಕೋವಿಡ್ ಟೆಸ್ಟ್ ನಲ್ಲಿ ಕೊರೊನ ಪಾಸಿಟಿವ್ ಬಂದಿದೆ. ಹೃದಯ ಕಾಯಿಲೆ ಸಂಬಂಧಿಸಿದಂತೆ ಅವರು ಚಿಕಿತ್ಸೆಗೆ ಆಗಮಿಸಿದ್ದರು. ಮೃತಪಟ್ಟ ಬಳಿಕ ಕೊರೊನಾ ಟೆಸ್ಟ್ ಮಾಡಲಾಗಿತ್ತು.  ಜಿಲ್ಲಾಡಳಿತದಿಂದ ಇನ್ನಷ್ಟೇ ಅಧಿಕೃತ ಘೋಷಣೆಯಾಗಬೇಕಿದೆ.