ಉಡುಪಿ: ಕೊರೋನಾ ನಿಯಂತ್ರಣಕ್ಕೆ ಚೆಕ್ ಪೋಸ್ಟ್ ಸ್ಥಾಪನೆ – ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ : ಜಿಲ್ಲೆಯಲ್ಲಿ ಕೊರೋನಾ ವೈರಸ್  ಹರಡುವುದನ್ನು ನಿಯಂತ್ರಿಸುವ ಸಲುವಾಗಿ , ಜಿಲ್ಲೆಯಲ್ಲಿನ  ದ.ಕನ್ನಡ ಮತ್ತು ಉ.ಕನ್ನಡ  ಗಡಿಗಳಲ್ಲಿ ಚೆಕ್‍ಪೋಸ್ಟ್ ಸ್ಥಾಪಿಸಲಾಗುವುದು  ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ಅವರು ಶನಿವಾರ  ಉಡುಪಿ ರೈಲ್ವೆ ನಿಲ್ದಾಣದ ಬಳಿ , ಉಡುಪಿ ನಗರಸಭೆಯಿಂದ ಕೊರೋನಾ ನಿಯಂತ್ರಣ ಕುರಿತಂತೆ ಸುರಕ್ಷಿತವಾಗಿ ಕೈ ತೊಳೆಯುವ ಕುರಿತಂತೆ ಜನಜಗೃತಿ ಮೂಡಿಸಲು ಆರಂಭಿಸಿರುವ, ಸ್ಯಾನಿಟೈಸರ್ ಸಹಿತ  ನಳ್ಳಿ ನೀರು ಸೌಲಭ್ಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈಗಾಗಲೇ ಕೇರಳದಿಂದ  ಕೊರೋನ ಪೀಡಿತರ ಸಂಖ್ಯೆ ಹೆಚ್ಚಾಗಿರುವುದರಿಂದ, ಕೇರಳದಿಂದ ದ.ಕನ್ನಡ […]