ಕಾಂಚನ್ ಉಪನಾಮಕ್ಕೆ ಮಾಡಿದ ಅವಮಾನ ಮೊಗವೀರ ಸಮುದಾಯಕ್ಕೆ ಅವಮಾನ ಮಾಡಿದಂತೆ: ರಮೇಶ್ ಕಾಂಚನ್

ಉಡುಪಿ: ಕಾಂಚನ್ ಎನ್ನುವುದು ಕರಾವಳಿ ತಡಿಯ ಉಡುಪಿಯ ಶ್ರಮ ಜೀವಿಗಳಾದ ಮೊಗವೀರ ಸಮುದಾಯದ ಹೆಮ್ಮೆಯ ಕುಲನಾಮ. ಇಲ್ಲಿ ಕಾಂಚನ್ ಮೂಲ ಸ್ಥಾನ ಕೂಡ ಹೊಂದಿದೆ. ಆದರೆ ನಮ್ಮ ಕುಲನಾಮವನ್ನು ಉಡುಪಿ ಬಿಜೆಪಿಯ ಬೆಂಬಲಿಗರು ಸೋಷಿಯಲ್ ಮೀಡಿಯಾದಲ್ಲಿ ವಿಕಾರವಾಗಿ ತಿರುಚಿ ಇಡೀ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿದ್ದಾರೆ. ಸಮಾಜ ಬಾಂಧವರು ವಿಚಲಿತರಾಗದೇ ಶಾಂತಿಯುತವಾಗಿ ಇರಬೇಕೆಂದು ಇಡೀ ಸಮಾಜದ ಪರವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ವಿನಂತಿಸಿಕೊಂಡಿದ್ದಾರೆ. ಕೈಲಾಗದವರ ಕೊನೆಯ ಅಸ್ತ್ರ ಅಪಪ್ರಚಾರ. ಗೆಲ್ಲುವ ಅಮಲಿನಲ್ಲಿದ್ದ ಬಿಜೆಪಿ ನಾಯಕರು ಪ್ರಸಾದ್ […]
ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ: ಪ್ರಸಾದ್ ರಾಜ್ ಕಾಂಚನ್

ಉಡುಪಿ: ಹನುಮಂತ ದೇವರು ಯಾವ ಸಂಘಟನೆಯ ವೈಯುಕ್ತಿಕ ಸೊತ್ತಲ್ಲಾ, ಬಜರಂಗದಳವನ್ನು ಸಮೀಕರಿಸುವ ಮೂಲಕ ಪಕ್ಷವೊಂದು ಭಕ್ತರ ಭಾವನೆಗೆ ಧಕ್ಕೆ ತರುವುದು ಸರಿಯಾದ ನಡೆಯಲ್ಲ. ಹನುಮಂತ ದೇಶ ವಿದೇಶ ಸೇರಿದಂತೆ ಪ್ರತಿ ಭಾರತೀಯನ ಹೃದಯದಲ್ಲಿ ಪೂಜನೀಯ ದೇವರು ಎಂದು ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಹೇಳಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಜರಂಗದಳವನ್ನು ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್ ಮುಂದಿಲ್ಲ. ಬಿಜೆಪಿ ಓಟಿಗಾಗಿ ವಾಸ್ತವ ವಿಷಯವನ್ನು ತಿರುಚಿ ಸುಳ್ಳು ಸುದ್ದಿ ಹರಡುತ್ತಿದೆ. ಪ್ರಜ್ಞಾವಂತ […]
ಉಚ್ಚಿಲ: ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಕೈ ಹಿಡಿದ 300 ಕ್ಕೂ ಹೆಚ್ಚು ಮೀನುಗಾರರು

ಉಚ್ಚಿಲ: ಬುಧವಾರದಂದು ಉಚ್ಚಿಲ ಬಡಾ ಗ್ರಾಮದ 300ಕ್ಕೂ ಹೆಚ್ಚು ಮೀನುಗಾರ ಮುಖಂಡರು ಹಾಗೂ ಯುವಕ ಮತ್ತು ಯುವತಿಯರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಪಕ್ಷದ ಧ್ವಜ ನೀಡಿ ಮೀನುಗಾರರನ್ನು ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಕುಮಾರ್ ಸೊರಕೆ, ಕಡಲ ತಡಿಯ ಈ ಭಾಗದಲ್ಲಿ ಮೀನುಗಾರರು ಬಹಳ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಷ್ಟು ಜನ ಮೀನುಗಾರರು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿರುವುದು ಇದೇ ಮೊದಲು. ಮೊಗವೀರ ಸಮಾಜವನ್ನು ಕೇವಲ ಓಟ್ ಬ್ಯಾಂಕ್ ಗೆ […]
ಮೈಸೂರು: ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯ ಸಹೋದರನ ಮನೆ ಮೇಲೆ ಐಟಿ ದಾಳಿ; 1 ಕೋಟಿ ವಶ

ಮೈಸೂರು: ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಚುನಾವಣಾ ಆಯೋಗವು ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದರೂ, ಅಕ್ರಮ ಹಣದ ಕಂತೆ ಕಂತೆಗಳು ಎಗ್ಗಿಲ್ಲದೆ ಅತ್ತಿಂದಿತ್ತ ಚಲಿಸುತ್ತಿವೆ. ಇದೀಗ ಮೈಸೂರಿನಲ್ಲಿರುವ ಸುಬ್ರಮಣ್ಯ ರೈ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ಒಂದು ಕೋಟಿ ರೂಪಾಯಿ ವಶಪಡಿಸಿಕೊಂಡಿದೆ. ಸುಬ್ರಮಣ್ಯ ರೈ ಪುತ್ತೂರಿನ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಅವರ ಸಹೋದರನಾಗಿದ್ದಾರೆ. ಕಳೆದ ಕೆಲವು ವಾರಗಳಿಂದ ಐಟಿ ಇಲಾಖೆಯು ಕರ್ನಾಟಕದಲ್ಲಿ ಚುನಾವಣಾ ಸರಮಾಲೆಯ ದಾಳಿಗಳನ್ನು ನಡೆಸಿದೆ. ಹುಬ್ಬಳ್ಳಿ, ಬೆಂಗಳೂರು, ಮೈಸೂರು ಹಾಗೂ ದಕ್ಷಿಣ […]
ಅಧಿಕಾರಕ್ಕೆ ಬಂದರೆ 94 ಸಿ ಅರ್ಜಿಗಳಿಗೆ ಮರುಜೀವ: ವಿನಯ್ ಕುಮಾರ್ ಸೊರಕೆ

ಉಡುಪಿ: ಶಾಸಕನಾಗಿದ್ದ ಕಾಲದಲ್ಲಿ ಶಿಫಾರಸು ಮಾಡಿದ್ದ 94 ಸಿ ಅರ್ಜಿಗಳು ಗೆದ್ದಲು ಹಿಡಿದಿದ್ದು ಅವುಗಳಿಗೆ ಮರುಜೀವ ಕೊಟ್ಟು ಬಡವರಿಗೆ ಮನೆ ಮಂಜೂರಾತಿ ಮಾಡುವ ಕೆಲಸವನ್ನು ಮಾಡಲಾಗುವುದು. 94 ಸಿ ಕಾನೂನು ಮತ್ತು ಅಕ್ರಮ ಸಕ್ರಮ ಯೋಜನೆಯಡಿ 2 ಸಾವಿರ ಅರ್ಜಿಗಳನ್ನು ಶಿಫಾರಸು ಮಾಡಿದ್ದರೂ ಅವುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ ಎಂದು ಕಾಪು ವಿಧನಾಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಹೇಳಿದರು. ಮೇ.1 ರಂದು ಪೆರ್ಡೂರು ಪೇಟೆಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಸ್ತೆ […]