ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಎಂದೂ ದೇಶಕ್ಕೆ ಅಪಾಯಕಾರಿ: ಕುಯಿಲಾಡಿ
ಉಡುಪಿ: ಕೇವಲ ಒಂದೇ ವರ್ಗದ ಓಲೈಕೆ ರಾಜಕಾರಣ ಮಾಡುತ್ತಾ ದೇಶದ ಏಕತೆ ಮತ್ತು ಸಮಗ್ರತೆಗೆ ಅಡ್ಡಿಯಾಗಿರುವ ಕಾಂಗ್ರೆಸ್ ಎಂದೂ ದೇಶಕ್ಕೆ ಅಪಾಯಕಾರಿ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರನ್ನು ಎರಡೆರಡು ಬಾರಿ ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್, ಅವರ ಸಾಧನೆ, ಘನತೆ, ಅರ್ಹತೆಗೆ ಭಾರತ ರತ್ನ ಗೌರವವನ್ನೂ ನೀಡದೆ. ಕನಿಷ್ಠ ಅವರ ಅಂತಿಮ ಸಂಸ್ಕಾರಕ್ಕೂ ದೆಹಲಿಯಲ್ಲಿ ಅವಕಾಶ ನೀಡದೇ ಅವಮಾನಿಸಿರುವುದು ಕರಾಳ ಇತಿಹಾಸವಾಗಿದೆ. ಮಾಜಿ […]