ದೇಶದ ಅಭಿವೃದ್ಧಿಗೆ ಇಂದಿರಾ ಕೊಡುಗೆ ಅಪಾರ: ಸಭಾಪತಿ

ಉಡುಪಿ: ದೇಶದ ಸಮಗ್ರ ಅಭಿವೃದ್ಧಿಗೆ ಇಂದಿರಾ ಗಾಂಧಿ ನೀಡಿದ ಕೊಡುಗೆ ಅಪಾರ. ಭೂ ಮಸೂದೆ ಕಾಯಿದೆ ಜಾರಿಗೊಳಿಸುವ ಮೂಲಕ ರೈತರಿಗೆ ಭೂಮಿ ಹಕ್ಕನ್ನು ನೀಡಿದ ಧೀಮಂತ ಮಹಿಳೆ ಎಂದು ಮಾಜಿ ಶಾಸಕ ಯು.ಆರ್‌. ಸಭಾಪತಿ ಹೇಳಿದರು. ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಹಾಗೂ ಜಿಲ್ಲಾ ಕಿಸಾನ್‌ ಘಟಕದ ಜಂಟಿ ಆಶ್ರಯದಲ್ಲಿ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ನಡೆದ ದಿವಂಗತ ಇಂದಿರಾ ಗಾಂಧಿಯವರ 102ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 20 ಅಂಶಗಳ ಕಾರ್ಯಕ್ರಮಗಳ ಮೂಲಕ ಬಡ ಕೃಷಿ ಕಾರ್ಮಿಕರಿಗೆ, ಮಹಿಳೆಯರಿಗೆ […]