ವಿಧಾನಸಭೆ ಚುನಾವಣೆ 27ರಂದು ರಾಹುಲ್ ಗಾಂಧಿ ಉಚ್ಚಿಲಕ್ಕೆ: ಸ್ಥಳ ಪರಿಶೀಲನೆ

ಪಡುಬಿದ್ರಿ: ಉಚ್ಛಿಲದ ಮಹಾಲಕ್ಷ್ಮೀ ದೇವಸ್ಥಾನದ ಶಾಲಿನಿ ಜಿ ಶಂಕರ್ ಸಭಾಂಗಣದಲ್ಲಿ ಏ. 27ರಂದು ನಡೆಯಲಿರುವ ಮೀನುಗಾರರ ಸಮಾವೇಶ ಹಾಗೂ ಸಂವಾದ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್‌ ಗಾಂಧಿ ಆಗಮನದಿಂದ ಮಂಗಳವಾರ ಸ್ಥಳ ಪರಿಶೀಲನೆ ನಡೆಸಲಾಯಿತು. ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನೇತೃತ್ವದಲ್ಲಿ ಸಭೆ, ಸಂವಾದ ನಡೆಯುವ ಸ್ಥಳವನ್ನು ಎಸ್ ಪಿ ಅಕ್ಷಯ್ ಮಚ್ಛಿಂದ್ರ ತಂಡ ಪರಿಶೀಲನೆ ನಡೆಸಿದರು. ಮುಖಂಡರಾದ ಅಶೋಕ್‌ ಕುಮಾರ ಕೊಡವೂರು, ಮಂಜುನಾಥ ಸುಣೇಗಾರ್, ಹರೀಶ್ ಕಿಣಿ, ಜಿತೇಂದ್ರ ಪುಟಾರ್ಡೋ, ಅಖಿಲೇಶ್ ಕೋಟ್ಯಾನ, […]