ಬ್ರಹ್ಮಾವರ; ಜೀವ ಬೆದರಿಕೆ ಆರೋಪ: ದೂರು, ಪ್ರತಿದೂರು ದಾಖಲು..!!

ಬ್ರಹ್ಮಾವರ: ನೀಲಾವರ ಜೋಡುಕಟ್ಟೆ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಪ್ರಸನ್ನ ಪುತ್ರಾಯ ಅವಾಚ್ಯವಾಗಿ ಬೈದು, ನಮ್ಮ ಜಾಗದ ತಕರಾರಿನ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಿಕೊಂಡು ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವುದಾಗಿ ಮಹೇಂದ್ರ ಕುಮಾರ್‌ ಆರೋಪಿಸಿ ಪ್ರತಿದೂರು ಸಲ್ಲಿಸಿದ್ದಾರೆ. ನರಸಿಂಹ ಶೆಟ್ಟಿ, ವಿಠಲ ಮರಕಾಲ ಹಾಗೂ ಪ್ರಸನ್ನ ಪುತ್ರಾಯ ಅವರ ನಡುವೆ ತಕರಾರು ಇರುವ ದಾರಿ ಮತ್ತು ಜಾಗದ ವಿಷಯದಲ್ಲಿ ರಾಜಿ ಪಂಚಾಯತಿ ಮಾಡಿದ್ದು, ಇದೇ ವಿಷಯದಲ್ಲಿ ಅಸಮಾಧಾನಗೊಂಡು ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ […]