ಡಿ.14 ರಂದು ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ಜನತಾ ಆವಿಷ್ಕಾರ್-2022 ಸ್ಪರ್ಧೆ

ಕುಂದಾಪುರ: ಇಲ್ಲಿನ ಹೆಮ್ಮಾಡಿಯಲ್ಲಿರುವ ಜನತಾ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ ಶ್ರೀ ವಿವಿವಿ ಮಂಡಳಿ ಹೆಮ್ಮಾಡಿ ಹಾಗೂ ಸಮರ್ಪಣ ಶೈಕ್ಷಣಿಕ ಟ್ರಸ್ಟ್ ಸಯೋಗದೊಂದಿಗೆ ಜನತಾ ಆವಿಷ್ಕಾರ್-2022 ಸ್ಪರ್ಧೆಯನ್ನು ಡಿ.14 ರಂದು ಬೆಳಗ್ಗೆ 9 ಆಯೋಜಿಸಲಾಗಿದ್ದು, ವ್ಯಾಪಾರ ಮಳಿಗೆ ವಿಜ್ಞಾನ ಮಾದರಿ ಮತ್ತು ಸಾಂಸ್ಕೃತಿಕ ಸಂಭ್ರಮ ವಿಭಾಗದಲ್ಲಿ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.   ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮರ್ಪಣ ಶೈಕ್ಷಣಿಕ ಟ್ರಸ್ಟ್ ನ ಅಧ್ಯಕ್ಷ ಗಣೇಶ್ ಮೊಗವೀರ್ ಇವರು ವಹಿಸಲಿದ್ದು, ಮುಖ್ಯ ಅತಿಥಿ ಮತ್ತು ಉದ್ಘಾಟಕರಾಗಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭಾಗವಹಿಸಲಿದ್ದಾರೆ. ವಿಶೇಷ […]

ಭತ್ತದ ಬೆಳೆ ಸ್ಪರ್ಧೆಗೆ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ

ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಗೆ ರೈತ ಹಾಗೂ ರೈತ ಮಹಿಳೆಯರಿಂದ ಪ್ರತ್ಯೇಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಫರ್ಧೆ ನಡೆಸಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದ್ದು, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ರೈತರು ಹಾಗೂ ರೈತ ಮಹಿಳೆಯರು ವಿವಿಧ ಹಂತದ ಬೆಳೆ ಸ್ಫರ್ಧೆಗೆ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿ, ಪಹಣಿ, ಪರಿಶಿಷ್ಟ ಜಾತಿ […]

ಮುಜರಾಯಿ‌ ಇಲಾಖೆ ದೇವಸ್ಥಾನದಲ್ಲೇ ಬಡವರು ಮದುವೆಯಾಗಬಹುದು: ಕೋಟ ಶ್ರೀನಿವಾಸ ಪೂಜಾರಿ

ಉಡುಪಿ: ರಾಜ್ಯದ ಮುಜರಾಯಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳಲ್ಲಿ ಬೇಕಾದಷ್ಟು ಹಣವಿದ್ದು, ಹೀಗಾಗಿ ಮುಂದಿನ‌ ದಿನಗಳಲ್ಲಿ ಬಡವರು ದೇವಸ್ಥಾನಗಳಲ್ಲಿಯೇ ಮದುವೆ ಮಾಡಿಕೊಳ್ಳಬೇಕು. ದೇವಸ್ಥಾನಗಳಲ್ಲಿಯೇ ಸಾಮೂಹಿಕ ವಿವಾಹಗಳನ್ನು ಆಯೋಜಿಸಿ ಬಡ ಜೋಡಿಗಳಿಗೆ ಮದುವೆ ಮಾಡಿಸುವಂತೆ ಕರ್ನಾಟಕ ರಾಜ್ಯದಲ್ಲಿರುವ ಶ್ರೀಮಂತ ದೇಗುಲಗಳ ಮುಖಂಡರು ಹಾಗೂ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಬ್ರಹ್ಮಶ್ರೀ ನಾರಾಯಣಗುರುಗಳ 165ನೇ ಜನ್ಮ ದಿನಾಚರಣೆಯ ಪ್ರಯುಕ್ತ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ ವತಿಯಿಂದ ಬನ್ನಂಜೆ ಶ್ರೀ […]