ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಕಂಚಿನ ಪದಕ ಗೆದ್ದ ಗುರುರಾಜ ಪೂಜಾರಿಗೆ ಅದ್ದೂರಿ ಸ್ವಾಗತ: ಜಿಲ್ಲಾಡಳಿತದಿಂದ ಸನ್ಮಾನ ಕಾರ್ಯಕ್ರಮ
ಉಡುಪಿ: ಇಂಗ್ಲೆಂಡ್ ನ ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದು, ಜಿಲ್ಲೆಗೆ ಆಗಮಿಸಿದ ಕುಂದಾಪುರದ ಗುರುರಾಜ ಪೂಜಾರಿ ಅವರನ್ನು ಇಂದು ಜಿಲ್ಲಾಡಳಿತದ ವತಿಯಿಂದ ಅಜ್ಜರಕಾಡು ಮಹಾತ್ಮಗಾಂಧಿ ಮೈದಾನದ ಬಳಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ಜಿಲಾಧಿಕಾರಿ ಕೂರ್ಮಾರಾವ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಪೌರಾಯುಕ್ತ ಡಾ.ಉದಯ ಶೆಟ್ಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ […]
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಮಳೆ: ಲಾನ್ ಬೌಲ್‌ನಲ್ಲಿ ಮಹಿಳಾ ತಂಡದ ಮೊದಲ ಚಿನ್ನದ ಪದಕ; ಪುರುಷರ ಟೇಬಲ್ ಟೆನಿಸ್ ನಲ್ಲೂ ಸ್ವರ್ಣ ಪದಕ
ಬರ್ಮಿಂಗ್ ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಇತಿಹಾಸ ಬರೆದಿದ್ದು, ಲಾನ್ ಬೌಲ್‌ನಲ್ಲಿ ಮಹಿಳಾ ತಂಡ ಮೊದಲ ಚಿನ್ನದ ಪದಕವನ್ನು ಪಡೆದುಕೊಂಡಿದೆ. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ, ಭಾರತಕ್ಕೆ ಪ್ರಮುಖವಾದ ಮೊದಲನೆ ಪಂದ್ಯದಲ್ಲಿ, ನಯನ್ಮೋನಿ ಸೈಕಿಯಾ, ಪಿಂಕಿ, ಲವ್ಲಿ ಚೌಬೆ ಮತ್ತು ರೂಪಾ ರಾಣಿ ಟಿರ್ಕಿ ಅವರ ಮಹಿಳಾ ಫೋರ್ಸ್ ಲಾನ್ ಬೌಲ್ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 17-10 ರಿಂದ ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದು ಇತಿಹಾಸ ರಚಿಸಿದೆ. ಪುರುಷರ ಟೇಬಲ್ ಟೆನಿಸ್ ತಂಡವು ಫೈನಲ್ ಪಂದ್ಯದಲ್ಲಿ ಸಿಂಗಾಪುರವನ್ನು […]
‘ಭಾರ’ ಎತ್ತುವ ಸ್ಪರ್ಧೆಯಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸುತ್ತಿರುವ ಕ್ರೀಡಾಪಟುಗಳು:ಬಿಂದ್ಯಾರಾಣಿ ದೇವಿಗೆ ಬೆಳ್ಳಿ ಪದಕ; ಎರಡು ದಿನದಲ್ಲಿ ನಾಲ್ಕು ಪದಕ ಗೆದ್ದ ‘ಭಾರ’ತ
ಬರ್ಮಿಂಗ್ ಹ್ಯಾಂಮ್: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಗರಿಮೆಯನ್ನು ಸತತವಾಗಿ ಎತ್ತುತ್ತಿರುವ ಸ್ಪರ್ಧಿಗಳಲ್ಲಿ ಬಿಂದ್ಯಾರಾಣಿ ದೇವಿಯವರು ಕೂಡಾ ಸೇರಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಭಾರತವು ತನ್ನ ನಾಲ್ಕನೇ ಪದಕವನ್ನು ಬಗಲಿಗೆ ಹಾಕಿಕೊಂಡಿದೆ. ಭಾರತದ ವೈಟ್ ಲಿಫ್ಟರ್ ಬಿಂದಿಯಾರಾಣಿ ದೇವಿಯವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 110 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಪದಕ ಗೆದ್ದ ಆಟಗಾರ್ತಿಗೆ ದೇಶದೆಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ.
ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ ಕಂಚು ಗೆದ್ದ ಕುಂದಾಪುರದ ಪಿ. ಗುರುರಾಜ ಪೂಜಾರಿ: ರಾಷ್ಟ್ರಪತಿ, ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಂದ ಅಭಿನಂದನೆಗಳ ಮಹಾಪೂರ
ಬರ್ಮಿಂಗ್ ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ, ಗುರುರಾಜ ಪೂಜಾರಿ ಪುರುಷರ 61 ಕೆಜಿ ತೂಕದ ವಿಭಾಗದಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ, ಈ ಬಾರಿ ತೂಕದ ವಿಭಾಗದಲ್ಲಿ ಮೇಲಕ್ಕೇರಿದ್ದಾರೆ. ಕೆನಡಾದ ಯೂರಿ ಸಿಮಾರ್ಡ್ ಅವರೊಂದಿಗಿನ ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಅವರು ಕಂಚಿನ ಪದಕ ಗೆಲ್ಲಲು ತಮ್ಮ ಅಂತಿಮ ಪ್ರಯತ್ನದಲ್ಲಿ 151 ಕೆಜಿ ಎತ್ತಬೇಕಾಯಿತು. ಗುರುರಾಜ್ ಒಟ್ಟು 269 ಕೆಜಿ (ಸ್ನ್ಯಾಚ್-118 ಕೆಜಿ; ಕ್ಲೀನ್ ಜರ್ಕ್-151 […]
ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇತಿಹಾಸ ಸೃಷ್ಟಿ: ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಪಡೆದ ಭಾರತದ ಸಂಕೇತ್ ಸರ್ಗರ್
ಬರ್ಮಿಂಗ್‌ಹ್ಯಾಮ್: ಮಹಾರಾಷ್ಟ್ರದ ಸಂಕೇತ್ ಸರ್ಗರ್ ಶನಿವಾರ, ಜುಲೈ 30 ರಂದು ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಪದಕ ಗೆದ್ದ ಭಾರತದ ಮೊದಲ ಅಥ್ಲೀಟ್ ಆಗುವ ಮೂಲಕ ಇತಿಹಾಸವನ್ನು ಬರೆದಿದ್ದಾರೆ. 21 ವರ್ಷ ವಯಸ್ಸಿನ ಸಂಕೇತ್ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಪುರುಷರ 55 ಕೆಜಿ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಸಂಕೇತ್ ಸರ್ಗರ್ ಪುರುಷರ 55 ಕೆಜಿ ವಿಭಾಗದಲ್ಲಿ ಒಟ್ಟು 248 ಕೆಜಿ (ಸ್ನ್ಯಾಚ್‌ನಲ್ಲಿ 113 ಕೆಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 135) ಬೆಳ್ಳಿ ಪದಕ ಗೆದ್ದಿದ್ದಾರೆ. ಒಟ್ಟು […]