ಶೀತ, ಕೆಮ್ಮು, ಚರ್ಮ ರೋಗದಂತಹ 16 ಔಷಧಿಗಳನ್ನು ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಮಾರಾಟ ಮಾಡಲು ಆರೋಗ್ಯ ಸಚಿವಾಲಯ ಚಿಂತನೆ
ನವದೆಹಲಿ: ಕೆಮ್ಮು, ಶೀತ, ನೋವು ಮತ್ತು ಚರ್ಮ ರೋಗಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿಗಳಾದ ಪ್ಯಾರೆಸಿಟಮಾಲ್, ನೇಸಲ್ ಡಿಕೊಂಜೆಸ್ಟೆಂಟ್‌ಗಳು ಮತ್ತು ಆಂಟಿಫಂಗಲ್‌ಗಳು ಶೀಘ್ರದಲ್ಲೇ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಲಭ್ಯವಾಗಲಿದೆ ಎನ್ನಲಾಗಿದೆ. ಕೇಂದ್ರವು ಅವುಗಳನ್ನು ಓವರ್ ದ ಕೌಂಟರ್ (ಒಟಿಸಿ) ವರ್ಗದ ಅಡಿಯಲ್ಲಿ ಪಟ್ಟಿ ಮಾಡಲು ಯೋಜಿಸುತ್ತಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ವರದಿ ಮಾಡಿದೆ. ಕೇಂದ್ರ ಆರೋಗ್ಯ ಸಚಿವಾಲಯವು 1945 ರ ಡ್ರಗ್ಸ್ ನಿಯಮಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದು, ಈಗ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿರುವ ಇಂತಹ 16 ಔಷಧಿಗಳಿಗೆ ವಿನಾಯಿತಿಗಳನ್ನು ಒದಗಿಸಲು […]