‘ಲೋಕ’ ಅಖಾಡಕ್ಕಿಳಿದ ಅಣ್ಣಾಮಲೈ: ಕೊಯಮತ್ತೂರಿನಿಂದ ಸ್ಪರ್ಧಿಸಲಿರುವ ಕರುನಾಡ ಸಿಂಘಂ

ಚೆನ್ನೈ: ಮಾಜಿ ಐಪಿಎಸ್ ಅಧಿಕಾರಿ ಕೆ.ಅಣ್ಣಾಮಲೈ (K Annamalai) ಕರ್ನಾಟಕದಲ್ಲಿ ಚಿರಪರಿಚಿತ ಹೆಸರು. ಕರುನಾಡ ಸಿಂಘಂ ಎಂದೇ ಖ್ಯಾತಿವೆತ್ತ ಕೆ.ಅಣ್ಣಾಮಲೈ ತಮಿಳುನಾಡಿನ ಬಿಜೆಪಿ (BJP) ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು ತಮಿಳುನಾಡು ರಾಜಕೀಯದಲ್ಲಿ ಸಂಚಲನ ಹುಟ್ಟುಹಾಕಿದ್ದಾರೆ. ಇದೀಗ, ಪಕ್ಷವು ಅವರನ್ನು ಕೊಯಮತ್ತೂರು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ ಅಣ್ಣಾಮಲೈ 2019 ರಲ್ಲಿ ಸೇವೆಗೆ ರಾಜೀನಾಮೆ ನೀಡಿ 2020 ರಲ್ಲಿ ಬಿಜೆಪಿ ಸೇರಿದರು. ಒಂದು ವರ್ಷದ ಬಳಿಕ ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡು 37 ನೇ ವಯಸ್ಸಿನಲ್ಲಿ ಅತಿ ಕಿರಿಯ […]

ಮಂಗಳೂರಿನಿಂದ ಅಯೋಧ್ಯೆಗೆ ತೆರಳಲಿದೆ ಕೊಯಮತ್ತೂರು ಅಯೋಧ್ಯಾ ಧಾಮ್ ಆಸ್ತಾ ರೈಲು

ಮಂಗಳೂರು: ಮಂಗಳೂರು ನಗರದಿಂದ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಲು ವಿಶೇಷ ರೈಲು ಸೇವೆಯನ್ನು ನೀಡಲಾಗುತ್ತಿದೆ. ರೈಲು ಸಂಖ್ಯೆ 06517 ಕೊಯಮತ್ತೂರು-ದರ್ಶನ್ ನಗರ-ಕೊಯಮತ್ತೂರು ಆಸ್ತಾ, ಫೆಬ್ರವರಿ 8 ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಹೊರಟು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಮೂಲಕ ಅಯೋಧ್ಯೆ ಜಂಕ್ಷನ್‌ಗೆ ಪ್ರಯಾಣಿಸಲಿದೆ. ಫೆಬ್ರವರಿ 8 ರಂದು ಸಂಜೆ 5:50 ಕ್ಕೆ ಮಂಗಳೂರು ಜಂಕ್ಷನ್‌ಗೆ ಆಗಮಿಸಿ 6 ಗಂಟೆಗೆ ಹೊರಡಲಿದೆ. ರೈಲು ಫೆಬ್ರವರಿ 11 ರಂದು ಮುಂಜಾನೆ ಅಯೋಧ್ಯೆಯ ದರ್ಶನ್ ನಗರ ರೈಲು ನಿಲ್ದಾಣಕ್ಕೆ ಆಗಮಿಸಲಿದೆ. ಫೆಬ್ರವರಿ […]

ಭಾರತ್ ಗೌರವ್ ಯೋಜನೆ: ಕೊಯಮತ್ತೂರಿನಿಂದ ಶಿರಡಿಗೆ ಪ್ರಯಾಣ ಬೆಳೆಸಿದೆ ದೇಶದ ಮೊದಲನೆ ಖಾಸಗಿ ರೈಲು

ನವದೆಹಲಿ: ಭಾರತೀಯ ರೈಲ್ವೆಯ ದಕ್ಷಿಣ ರೈಲ್ವೇ ವಲಯವು ತಮಿಳುನಾಡಿನ ಕೊಯಮತ್ತೂರಿನಿಂದ ಮಹಾರಾಷ್ಟ್ರದ ಶಿರಡಿಗೆ ಖಾಸಗಿಯಾಗಿ ನಡೆಸುವ ‘ಭಾರತ್ ಗೌರವ್’ ರೈಲುಗಳ ಮೊದಲ ಸೇವೆಯನ್ನು ಪ್ರಾರಂಭಿಸಿತು. ಭಾರತ್ ಗೌರವ್ ರೈಲು ಕೊಯಮತ್ತೂರು ಉತ್ತರದಿಂದ 14 ಜೂನ್ ಸಂಜೆ 6 ಗಂಟೆಗೆ ಹೊರಟು ಜೂನ್ 16 ರಂದು ಬೆಳಗ್ಗೆ 07:25 ಗಂಟೆಗೆ ಸಾಯಿನಗರ ಶಿರಡಿಯನ್ನು ತಲುಪುತ್ತದೆ. ತಿರುಪ್ಪೂರ್, ಈರೋಡ್, ಸೇಲಂ, ಯಲಹಂಕ, ಧರ್ಮಾವರಂ, ಮಂತ್ರಾಲಯ ರಸ್ತೆ ಮತ್ತು ವಾಡಿಯಲ್ಲಿ ರೈಲು ನಿಲುಗಡೆಯಾಗಲಿದೆ ಎಂದು ರೈಲ್ವೆ ಸಚಿವಾಲಯವು ಮಂಗಳವಾರ ತಿಳಿಸಿದೆ. ಮಂಗಳವಾರ […]