ಸಚಿನ್ ಬಾಲ್ಯದ ಕೋಚ್ ರಮಾಕಾಂತ್ ಆಚ್ರೇಕರ್ ನಿಧನ
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಕ್ರಿಕೆಟ್ ಕೋಚ್ ರಮಾಕಾಂತ್ ಆಚ್ರೇಕರ್ (87) ಬುಧವಾರ ಸಂಜೆ ನಿಧನರಾಗಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು ಒಬ್ಬ ಉತ್ತಮ ಬ್ಯಾಟ್ಸ್ ಮನ್ ಆಗಿ ರೂಪಿಸಿದ್ದ ರಮಾಕಾಂತ್ ಅವರು ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬಾಲ್ಯದ ದಿನಗಳಲ್ಲಿ ತಮ್ಮನ್ನು ಉತ್ತಮವಾಗಿ ರೂಪಿಸಿದ್ದ ಕೋಚ್ ರಮಾಕಾಂತ್ ಅವರ ಬಗ್ಗೆ ಸಚಿನ್ ಅವರು ಹೆಚ್ಚಿನ ಗೌರವ ಹೊಂದಿದ್ದರು. ರಮಾಕಾಂತ್ ಅವರು ತಮ್ಮ ವೃತ್ತಿ ಜೀವನದಲ್ಲಿ ಕೇವಲ ಸಚಿನ್ ಮಾತ್ರವಲ್ಲದೇ ವಿನೋದ್ ಕಾಂಬ್ಳಿ, ಪ್ರವೀಣ್ ಅಮ್ರೆ, ಸಮೀರ್ […]