ಮಲ್ಪೆ ಮೀನುಗಾರರ ರೈತ ಉತ್ಪಾದಕ ಕಂಪನಿ ವತಿಯಿಂದ ಪಚ್ಚಲೆ ಕೃಷಿ ಕಾರ್ಯಾಗಾರ

ಉಡುಪಿ : ಇಲ್ಲಿನ ಮಲ್ಪೆ ಮೀನುಗಾರರ ರೈತ ಉತ್ಪಾದಕ ಕಂಪನಿಯಿಂದ ಪಚ್ಚಲೆ ಕೃಷಿಯಲ್ಲಿ ಉದ್ಯಮ ಶೀಲತೆ ಮತ್ತು ಬೆಳವಣಿಗೆಯ ಅವಕಾಶಗಳ ಕುರಿತ ಮಾಹಿತಿ ಕಾರ್ಯಾಗಾರವು ಕಲ್ಯಾಣಪುರದ ಸುವರ್ಣ ನದಿತೀರದಲ್ಲಿ ಜರುಗಿತು. ಐಸಿಏಆರ್ ಮತ್ತು ಸಿಎಂಎಫ್‌ಆರ್‌ಐನ ಮಂಗಳೂರು ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಗೀತಾ ಸಸಿಕುಮಾರ್ ಅವರು ಪಚ್ಚಲೆ ಕೃಷಿಯಲ್ಲಿ ಅತ್ಯಂತ ಕಡಿಮೆ ಶ್ರಮ ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸುವ ಅವಕಾಶವಿದೆ ಎಂದು ತಿಳಿಸಿ ಪಚ್ಚಲೆ ಕೃಷಿಯನ್ನು ವ್ಯವಸ್ಥಿತವಾಗಿ ಮಾಡುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಸವಿವರವಾಗಿ ತಿಳಿಸಿಕೊಟ್ಟರು. […]