ಚೆಕ್ ಅಮಾನ್ಯ ಪ್ರಕರಣ: ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ
ಉಡುಪಿ: ಕಾಪು ತಾಲೂಕಿನ ಕುರ್ಕಾಲು ಗ್ರಾಮದ ನಿವಾಸಿ, ಬಂಗೇರ ಫ್ಲೋರ್ ಮಿಲ್ಸ್ ನ ಮಾಲಕ ಆರೋಪಿ ಆಕಾಶ್ ಬಂಗೇರರಿಗೆ ಒಂದು ವರ್ಷ ಶಿಕ್ಷೆ ಹಾಗೂ 6,35,000ರೂ ಪರಿಹಾರ ಹಣವನ್ನು ಉಡುಪಿ ಫಿರ್ಯಾದಿದಾರರಾದ ಕೆ.ಎನ್.ಎಸ್.ಕಾಮತ್ ಎಂಡ್ ಸನ್ಸ್ ನ ಮಾಲಕರಾದ ಕಟಪಾಡಿಯ ಹಿರಿಯ ಪ್ರಜೆ ವಿಠಲ್ ಎನ್.ಕಾಮತ್ ರಿಗೆ ನೀಡುವಂತೆ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶ ಜ.ಶ್ಯಾಮ್ ಪ್ರಕಾಶ್ ರವರು ಆದೇಶಿಸಿದ್ದಾರೆ. ಚೆಕ್ ಅಮಾನ್ಯ ಪ್ರಕರಣದಲ್ಲಿ ನ.21 ಸೋಮವಾರದಂದು ಸಂಪೂರ್ಣ ವಿಚಾರಣೆ ನಡೆಸಿದ ನ್ಯಾಯಾಲಯ, […]
ವಕೀಲರ ಮನೆಯಲ್ಲಿ ಕಳ್ಳತನ ಪ್ರಕರಣ: ಆರೋಪಿಗೆ ಕಾರಾಗೃಹವಾಸ ಶಿಕ್ಷೆ ವಿಧಿಸಿದ ಜಿಲ್ಲಾ ನ್ಯಾಯಾಲಯ
ಉಡುಪಿ: ವಕೀಲರೊಬ್ಬರ ಮನೆಯಲ್ಲಿ ಕಳ್ಳತನ ನಡೆಸಿದ ಆರೋಪಿಗೆ ನಗರದ ಪ್ರಧಾನ ಹಿರಿಯ ಸಿಜೆ ಮತ್ತು ಸಿ.ಜೆ.ಎಂ ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಫೆ.23 ರಂದು ಫಿಲಿಪ್ ಪಿ.ಥೋಮಸ್ ಎಂಬಾತನು ಮಧ್ಯಾಹ್ನ 2 ಗಂಟೆ ಸುಮಾರಿಗೆ ಯುಬಿಎಂಸಿ ಜುಬಿಲಿ ಚರ್ಚ್ ಬಳಿಯಿರುವ ವಕೀಲ ನೋವೆಲ್ ಪ್ರಶಾಂತ್ ಕರ್ಕಡ ಇವರ ಮನೆಗೆ ನುಗ್ಗಿ, ಮೊಬೈಲ್ ಮತ್ತು ಲ್ಯಾಪ್ ಟಾಪ್ ಕಳವು ಮಾಡಿದ್ದು, ನಗರ ಠಾಣೆ ಉಪನಿರೀಕ್ಷಕರು ಪ್ರಕರಣ ದಾಖಲಿಸಿ ತನಿಖೆ ನಡೆಸಿ ಆರೋಪಿಯ ವಿರುದ್ದ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ […]
ಪಾದಚಾರಿಯ ಸಾವಿಗೆ ಕಾರಣನಾದ ಅಪಘಾತದ ಆರೋಪಿಗೆ ಕಾರಾಗೃಹ ಶಿಕ್ಷೆ
ಉಡುಪಿ: ಅತಿವೇಗ ಹಾಗೂ ಅಜಾಗರೂಕತೆಯಿಂದ ಲಾರಿ ಚಲಾಯಿಸಿ ಪಾದಚಾರಿಗೆ ಡಿಕ್ಕಿ ಹೊಡೆಸಿ, ಸಾವಿಗೆ ಕಾರಣವಾದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2021 ಫೆಬ್ರವರಿ 28 ರಂದು ಸಂಜೆ 4.30 ರ ಸುಮಾರಿಗೆ ಮಂಗಳೂರಿನ ಶಾಂತಿಗುಡ್ಡೆ ಮನೆ ನಿವಾಸಿ ಅಬೂಬಕ್ಕರ್ ಎಂಬಾತನು ಬ್ರಹ್ಮಾವರ ತಾಲೂಕು ಹಲುವಳ್ಳಿ ಗ್ರಾಮದ ಹೆಬ್ರಿ-ಬ್ರಹ್ಮಾವರ ಮುಖ್ಯ ರಸ್ತೆಯ ಧಾರಣ-ಕಂಬಳ ಎಂಬಲ್ಲಿ ಕಂಟೈನರ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ […]
ಮಹಿಳೆಯ ಮರಣಕ್ಕೆ ಕಾರಣನಾದ ಅಪಘಾತದ ಆರೋಪಿಗೆ ಕಾರಾಗೃಹ ಶಿಕ್ಷೆ
ಉಡುಪಿ: ದುಡುಕುತನ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನ ಚಲಾಯಿಸಿ ಮಹಿಳೆಯ ಸಾವಿಗೆ ಕಾರಣವಾದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2019 ಜನವರಿ 26 ರಂದು 8.30 ರ ಸುಮಾರಿಗೆ ಅಲೆವೂರು ಗ್ರಾಮದ ಬೋಜ ಎಂಬಾತನು ಬಡಗುಬೆಟ್ಟು ಗ್ರಾಮದ ಕುಕ್ಕಿಕಟ್ಟೆ ಮುಚ್ಲಿಕೋಡು ದೇವಸ್ಥಾನದ ದ್ವಾರದ ಬಳಿ ದ್ವಿಚಕ್ರ ವಾಹನವನ್ನು ದುಡುಕುತನ ಹಾಗೂ ಅಜಾಗರೂಕರೆಯಿಂದ ರಸ್ತೆಯ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆ ಪಕ್ಕದಲ್ಲಿ ನಡೆದುಕೊಂಡು […]
ಅಫಘಾತ ನಡೆಸಿ ಪಾದಚಾರಿಯ ಮರಣಕ್ಕೆ ಕಾರಣನಾದ ಆರೋಪಿಗೆ ಶಿಕ್ಷೆ
ಉಡುಪಿ: ಅಜಾಗರೂಕತೆಯಿಂದ ಬೈಕ್ ಚಲಾಯಿಸಿ, ರಸ್ತೆ ಬದಿ ನಡೆದುಕೊಂಡ ಹೋಗುತ್ತಿದ್ದ ಪಾದಚಾರಿಯ ಸಾವಿಗೆ ಕಾರಣವಾದ ಆರೋಪಿಗೆ ನಗರದ 1 ನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ. 2018 ಸೆಪ್ಟಂಬರ್ 4 ರಂದು ಸಂಜೆ 4.45 ರ ಸುಮಾರಿಗೆ ಉಡುಪಿ ತಾಲೂಕು ಉದ್ಯಾವರ ಕೊಪ್ಲದ ನಿವಾಸಿ ದರ್ಶನ್ ಎಂಬಾತನು ಮಣಿಪಾಲ-ಉಡುಪಿ ರಾ.ಹೆ ಏಕಮುಖ ಸಂಚಾರ ರಸ್ತೆಯಲ್ಲಿ ಅಜಾಗರೂಕತೆಯಿಂದ ಬೈಕನ್ನು ಚಲಾಯಿಸಿಕೊಂಡು ಬಂದು ಶಿವಳ್ಳಿ ಗ್ರಾಮದ ಎಂ.ಜಿ.ಎಂ ಕಾಲೇಜಿನ ಡಾ.ಟಿ.ಎಂ.ಎ. ಪೈ […]