ಉಡುಪಿ: ಕೊಲೆ ಬೆದರಿಕೆ ಹಾಕಿದ್ದ ಆರೋಪಿ ದೋಷಮುಕ್ತ

ಉಡುಪಿ: ಕೊಲೆ ಬೆದರಿಕೆಯೊಡ್ಡಿದ ಆರೋಪಿಯನ್ನು ಆರೋಪ ಮುಕ್ತಗೊಳಿಸಿ, ಬಿಡುಗಡೆ ಮಾಡಿ ಉಡುಪಿ 3ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ವಿನಾಯಕ ವಾನಖಂಡೆ ಅವರು ತೀರ್ಪು ನೀಡಿದ್ದಾರೆ. ಕಾಪು ತಾಲೂಕಿನ ಕುರ್ಕಾಲು ಗ್ರಾಮದ ಕುಂಜಾರುಗಿರಿ ಅಂಚೆ ವ್ಯಾಪ್ತಿಯ ನಿವಾಸಿ, ಸದಾನಂದ ಮಡಿವಾಳ ಯಾನೆ ಸಾಧು ಅವರು ಮಹಿಳೆಯೊಬ್ಬರಿಗೆ ಜಾತಿ ನಿಂದನೆ, ಗಾಯ ಹಾಗೂ ಕೊಲೆ ಬೆದರಿಕೆ ಪ್ರಕರಣದಡಿ ವಿಚಾರಣೆಯಲ್ಲಿದ್ದರು. ಬುಧವಾರ ಸಂಪೂರ್ಣ ವಿಚಾರಣೆ ನಡೆಸಿ ಇವರನ್ನು ಆರೋಪ ಮುಕ್ತಗೊಳಿಸಿ ಬಿಡುಗಡೆ ಮಾಡಿ ತೀರ್ಪು ನೀಡಲಾಗಿದೆ. […]