ಔರಾ ಕೆಫೆ&ಕೇಕ್ ಶಾಪ್ ಶುಭಾರಂಭ

ಉಡುಪಿ: ನಗರದ ಹೊಸ ಬಸ್ ನಿಲ್ದಾಣದ ಬಳಿಯ ಜಿ.ಬಿ. ಪಂತ್ ರಸ್ತೆಯಲ್ಲಿರುವ ಗ್ರಾಸ್ ಲಾಂಡ್ ಕಾಂಪ್ಲೆಕ್ಸ್ ನಲ್ಲಿ ಔರಾ ಕೆಫೆ ಶಾಪ್ ಭಾನುವಾರಂದು ಶುಭಾರಂಭಗೊಂಡಿತು. ಸೇಂಟ್ ಆಂಟೋನಿ ಆರ್ಥೊಡಾಕ್ಸ್ ಚರ್ಚ್ ಕೊಳಲಗಿರಿ ಇದರ ಧರ್ಮಗುರು ಫಾ.ಡೇವಿಡ್ ಕ್ರಾಸ್ತಾ ಬೇಕರಿಯನ್ನು ಉದ್ಘಾಟಿಸಿದರು. ಬೇಕರಿ ಮಾಲೀಕರಾದ ನಿಶಾನ್ ಡಿಸೋಜಾ ಮತ್ತು ನೆಯಾನ್ ಡಿಸೋಜಾ ಉಪಸ್ಥಿತರಿದ್ದರು. ಔರಾ ಕೆಫೆ ಶಾಪ್ ನಲ್ಲಿ ಮನೆಯಲ್ಲೇ ತಯಾರಿಸಿದ ಐಸ್ ಕ್ರೀಮ್, ಬೇಕರಿ ಉತ್ಪನ್ನಗಳು, ಚಾಕೋಲೇಟ್ ಗಳು ಹಾಗೂ ಪೆಸ್ಟ್ರಿಗಳು ದೊರೆಯುತ್ತವೆ.

ಆಗಸ್ಟ್ 31 ರಂದು ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಪ್ರಾರಂಭ

ಉಡುಪಿ: ಕೋಸ್ಟಲ್ ಕಿಚನ್ ಫ್ಯಾಮಿಲಿ ರೆಸ್ಟೋರೆಂಟ್ ಹವಾನಿಯಂತ್ರಿತ ಸಸ್ಯಾಹಾರಿ ಮತ್ತು ಮಾಂಸಾಹಾರಿ ರೆಸ್ಟೋರೆಂಟ್ ಉಡುಪಿಯ ಹೃದಯ ಭಾಗದ ಸಿಟಿ ಬಸ್ ನಿಲ್ದಾಣದ ಎದುರುಗಡೆ ಪ್ರಾರಂಭವಾಗಲಿದ್ದು, ರೆಸ್ಟೋರೆಂಟಿನ ಉದ್ಘಾಟನಾ ಸಮಾರಂಭವು ಆಗಸ್ಟ್ 31 ಬುಧವಾರದಂದು ಬೆಳಗ್ಗೆ 10.00 ಗಂಟೆಗೆ ಜರುಗಲಿದೆ. ರೆಸ್ಟೋರೆಂಟಿನಲ್ಲಿ ಶುಚಿ-ರುಚಿಯಾದ ಸಮುದ್ರ ಆಹಾರ, ಚೈನೀಸ್, ಭಾರತೀಯ, ತಂದೂರಿ, ಮೀನು ಊಟ, ಜ್ಯೂಸ್ ಮತ್ತು ಐಸ್ ಕ್ರೀಮ್ ಲಭ್ಯವಿದೆ. ಮಾಹಿತಿಗಾಗಿ ಸಂಪರ್ಕಿಸಿ: 8088069166/9108599288

ಸಿಟಿ ಬಸ್ ನಿಲ್ದಾಣ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ: ಆಕ್ಷೇಪಣೆ ಆಹ್ವಾನ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣದಿಂದ ನರ್ಮ್ ಬಸ್‌ ಸ್ಟ್ಯಾಂಡ್ ಬಳಿಯಿಂದ ಸರ್ವೀಸ್ ಬಸ್ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿರುವ ವೃತ್ತಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡುವ ಕುರಿತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಇವರು ಮನವಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.

ಡಾ. ವಿ. ಎಸ್. ಆಚಾರ್ಯ ಮತ್ತು ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರಿಗೆ ಬಸ್ ಗಳ ವೇಳಾಪಟ್ಟಿ

ಉಡುಪಿ: ಉಡುಪಿಯ ಬನ್ನಂಜೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕೆ.ಎಸ್.ಅರ್.ಟಿ.ಸಿ ನಿಗಮದ ಡಾ. ವಿ. ಎಸ್. ಆಚಾರ್ಯ ಬಸ್ ನಿಲ್ದಾಣದಿಂದ ಹಾಗೂ ಉಡುಪಿ ನಗರ ಬಸ್ ನಿಲ್ದಾಣದಿಂದ ಸಾರ್ವಜನಿಕ ಪ್ರಯಾಣಿಕರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜಿಲ್ಲಾ ವ್ಯಾಪ್ತಿಯ ಸ್ಥಳಗಳಾದ ನೆಲ್ಲಿಕಟ್ಟೆ, ಹೆಬ್ರಿ, ಹೊನ್ನಾಳ, ಮಂಚಕಲ್, ಕಾರ್ಕಳ, ಕೊಕ್ಕರ್ಣೆ, ಹೆರ್ಗ, ಶಿರ್ವ-ಮಂಚಕಲ್, ಹಂಪನಕಟ್ಟೆ, ಕೆಳಸಂಕ, ಮಲ್ಪೆಬೀಚ್, ಪಡುಕೆರೆ, ಇತ್ಯಾದಿ ಸ್ಥಳೀಯ ವಲಯಗಳಲ್ಲಿ ಕಾರ್ಯಾಚರಣೆಯಾಗುತ್ತಿರುವ ಸಾರಿಗೆಗಳ ವೇಳಾ ಪಟ್ಟಿ ಹೀಗಿದೆ. ಉಡುಪಿಯಿಂದ ಕಾರ್ಕಳಕ್ಕೆ 6:55, 10:02, 13:47, 16:51, 8:24, 11:32, 14:45, […]