ಇನ್‌ಸ್ಟಾಗ್ರಾಮ್ ಖಾತೆ ತೆಗೆದ ತೆಗೆದ ನಟ​ ಪವನ್​ ಕಲ್ಯಾಣ್​ ಕೆಲವೇ ಗಂಟೆಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಪಾಲೋವರ್ಸ್​

ಸಿನಿಮಾ ಮತ್ತು ರಾಜಕೀಯ ಎರಡನ್ನೂ ಸಮಾನವಾಗಿ ಬ್ಯಾಲನ್ಸ್​ ಮಾಡುತ್ತಾ ಹಲವಾರು ಕೋಟಿ ಜನರ ಪ್ರೀತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ತಮ್ಮದೇ ಸ್ಟೈಲ್​ನಲ್ಲಿ ನಟಿಸಿ ಇಂಪ್ರೆಸ್​ ಮಾಡಿದ್ದ ಈ ಸ್ಟಾರ್​ ಹೀರೋ, ಅದೇ ಬಲವನ್ನು ರಾಜಕೀಯದಲ್ಲೂ ತೋರಿಸಲು ಪ್ರಯತ್ನಿಸುತ್ತಿದ್ದಾರೆ.ಟಾಲಿವುಡ್​ ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ತೆಲುಗಿನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅವರು ಈವರೆಗೆ ಮಾಧ್ಯಮದಲ್ಲಿ ಮತ್ತು ಟ್ವಿಟರ್​ನಲ್ಲಿ ತಮ್ಮ ಅಭಿಪ್ರಾಯಗಳನ್ನು, ಸಿನಿಮಾ ವಿಚಾರಗಳನ್ನು ತಿಳಿಸುತ್ತಿದ್ದರು. ಇತ್ತೀಚೆಗೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಇನ್​ಸ್ಟಾಗ್ರಾಮ್​ಗೆ ಪ್ರವೇಶಿಸಿದ್ದಾರೆ. ಕೆಲವು ದಿನಗಳ ಹಿಂದೆ […]