ಅಪ್ಪಟ ಸ್ವದೇಶೀ ನಿರ್ಮಿತ ನಮ್ಮ ಊರಿನ ಬ್ರ್ಯಾಂಡ್ ಕ್ಯಾಂಪ್ಕೋ ಚಾಕಲೇಟ್!!

  ಆಗಿನ್ನೂ ದೇಶದಲ್ಲಿ ಕ್ಯಾಡ್ ಬರೀಸ್, ನೆಸ್ಲೆ ಕಿಟ್ ಕ್ಯಾಟ್ ನಂತಹ ಕಂಪನಿಗಳು ಮನೆ ಮಾತಾಗಿರಲಿಲ್ಲ. ನಾವು ಸಣ್ಣವರಿದ್ದಾಗ ನಾಲ್ಕಾಣೆ, ಎಂಟಾಣೆಯ ಚಿಕ್ಕ ಪುಟ್ಟ ಚಾಕಲೇಟುಗಳೇ ನಮಗೆ ಕ್ಯಾಡ್ ಬರಿ, ಕಿಟ್ ಕ್ಯಾಟ್ ಆಗಿದ್ದವು. ಮುಂಬೈ ಅಥವಾ ವಿದೇಶದಿಂದ ಯಾರಾದರೂ ಊರಿಗೆ ಬಂದಾಗ ಮಾತ್ರ ಫೈವ್ ಸ್ಟಾರ್, ಕ್ಯಾಡ್ ಬರಿಯಂತಹ ಚಾಕಲೇಟುಗಳ ದರ್ಶನ ಭಾಗ್ಯ ನಮಗಾಗುತ್ತಿತ್ತು. ಆಗ ಬರುತ್ತಿದ್ದ ಅದೆಷ್ಟೋ ಚಾಕಲೇಟುಗಳಲ್ಲಿ ನೀಲಿ ಬಣ್ಣದ ಜರಿಯಲ್ಲಿ ಒಂದು ಕೆಂಪು ಹೃದಯದ ಚಿತ್ರವಿರುವ ಕ್ಯಾಂಪ್ಕೋ ಚಾಕಲೇಟ್ ಅತ್ಯಂತ ಪ್ರಸಿದ್ದವಾಗಿತ್ತು. […]