‘ಕಿಟ್ ಕ್ಯಾಟ್’ ರ್ಯಾಪರ್ ನಲ್ಲಿ ಮರವಂತೆ ಮಿಂಚಿಂಗ್: ನಮ್ಮ ಕರಾವಳಿಯ ಕಡಲ ಕಿನಾರೆಗೆ ಸಿಕ್ತು ಜಾಗತಿಕ ಮನ್ನಣೆ
ಉಡುಪಿ:ನಮ್ಮ ರಾಜ್ಯದ ಚಂದದ ಕಡಲ ಕಿನಾರೆಗಳ ಪೈಕಿ ಮರವಂತೆಗೆ ಅದರದ್ದೇ ಆದ ಸೌಂದರ್ಯವಿದೆ. ಪ್ರವಾಸಿಗರ ಮೈ ಮನಗಳಲ್ಲಿ ಮರವಂತೆ ಯಾವಾಗಲೂ ಮೈ ನವಿರೇಳಿಸುವಂತಹ ಅನುಭವವನ್ನೇ ಕೊಡುತ್ತಿರೋದು ನಿಮಗೆಲ್ಲಾ ಗೊತ್ತು. ಈಗ ಇದೇ ಮರವಂತೆಯ ಕಡಲು ಕಿಟ್ ಕ್ಯಾಟ್ ಚಾಕಲೇಟ್ ನ ರ್ಯಾಪರ್ ನಲ್ಲಿ ಮಿಂಚಿ ಜಗತ್ತಿನಲ್ಲೆಲ್ಲಾ ಓಡಾಡುತ್ತಿದೆ. ಹೌದು ಮರವಂತೆ ಬೀಚ್ ಚಿತ್ರವನ್ನು ಜಾಗತಿಕ ಮಟ್ಟದ ಪ್ರತಿಷ್ಠಿತ ಆಹಾರ ಪದಾರ್ಥಗಳ ಉತ್ಪಾದನೆ, ಮಾರಾಟದ ನೆಸ್ಲೆ ಸಂಸ್ಥೆ ‘ಕಿಟ್‌ಕ್ಯಾಟ್’ ಚಾಕಲೆಟ್ ತನ್ನ ರ್ಯಾಪರ್ ನಲ್ಲಿ ಬಳಸಿದೆ. ಆ ಮೂಲಕ ಮರವಂತೆ ಬೀಚ್ […]