ಕುಂದಾಪುರ: ಉದ್ಯಮಿ ಕಟ್ಟೆ ಭೋಜಣ್ಣನ ಆತ್ಯಹತ್ಯೆಗೆ ಆಭರಣ ವ್ಯಾಪಾರಿ ಮತ್ತು ಬ್ರೋಕರ್ ಕಾರಣ? ಡೆತ್ ನೋಟ್ ನಲ್ಲಿ ಬಯಲಾಯ್ತು ಸತ್ಯ

ಕುಂದಾಪುರ: ಗುರುವಾರದಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಕುಂದಾಪುರದ ಖ್ಯಾತ ಉದ್ಯಮಿ, ಕಟ್ಟೆ ಭೋಜಣ್ಣ ಅವರ ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಉದ್ಯಮಿಗಳಾದ ಗೋಲ್ಡ್ ಜ್ಯುವೆಲರ್ಸ್‌ನ ಗಣೇಶ್ ಶೆಟ್ಟಿ ಮತ್ತು ಬ್ರೋಕರ್ ಹಂಗಳೂರು ಇಸ್ಮಾಯಿಲ್ ಅವರ ಹೆಸರನ್ನು ತಮ್ಮ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವವರ ಮನೆಯ ಸಿಟ್‌ಔಟ್‌ನಲ್ಲಿ ಕುಳಿತು ತನ್ನ ರಿವಾಲ್ವರ್‌ ಬಳಸಿ ಆತ್ಮಹತ್ಯೆ ಮಾಡುತ್ತೇನೆಂದು ತಿಳಿಸುವ ಮುನ್ನ, ನಗದು ಹಾಗೂ ಚಿನ್ನ ವಾಪಸ್‌ ನೀಡದ ಕಾರಣ ಎದುರಿಸುತ್ತಿರುವ ಸಮಸ್ಯೆಗಳ […]

ಕೋಟೇಶ್ವರ: ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

ಕೋಟೇಶ್ವರ: ಖ್ಯಾತ ಉದ್ಯಮಿ, ಚಿನ್ಮಯಿ ಆಸ್ಪತ್ರೆ ಮಾಲೀಕ ಕಟ್ಟೆ ಗೋಪಾಲಕೃಷ್ಣ (ಭೋಜಣ್ಣ) ಅವರು ಗುರುವಾರ ಬೆಳಿಗ್ಗೆ ತಮ್ಮ ಸ್ವಂತ ರಿವಾಲ್ವರ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಇಲ್ಲಿನ ಕೋಟೇಶ್ವರ ಸಮೀಪದ ಪುರಾಣಿಕ ರಸ್ತೆಯ ಕುದುರೆಬೆಟ್ಟುವಿನಲ್ಲಿರುವ ಮೊಳಹಳ್ಳಿ ಗಣೇಶ್ ಶೆಟ್ಟಿ ಎಂಬುವರ ಮನೆಯ ಸಿಟೌಟ್ ನಲ್ಲಿ ಕಟ್ಟೆ ಭೋಜಣ್ಣ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಹುಕೋಟಿ ಉದ್ಯಮಿಯಾಗಿರುವ ಕಟ್ಟೆ ಭೋಜಣ್ಣ, ಗಂಗೊಳ್ಳಿ, ತಲ್ಲೂರು, ಬೈಂದೂರು ಸೇರಿದಂತೆ ಬೆಂಗಳೂರಿನಲ್ಲೂ ಹೋಟೆಲ್, ಬಟ್ಟೆ ಅಂಗಡಿ ಮೊದಲಾದ ಉದ್ಯಮಗಳನ್ನು […]