ಟೇಬಲ್ ಟೆನ್ನಿಸ್ನಲ್ಲಿ ಪ್ರಿ-ಕ್ವಾರ್ಟರ್ಗೆ ಪ್ರವೇಶ : ಪ್ರಾಥಮಿಕ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು..
ಹ್ಯಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಗಳಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ತಮ್ಮ ಗುಂಪಿನಲ್ಲಿನ ಪ್ರಾಥಮಿಕ ಸುತ್ತಿನ ಪಂದ್ಯಗಳಲ್ಲಿ ಗೆಲುವಿನ ಓಟವನ್ನು ಅಜೇಯವಾಗಿ ಮುಂದುವರಿಸಿದ್ದು, ಸತತ ಗೆಲುವಿನಿಂದ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ.ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಜಿಮ್ನಾಷಿಯಂನಲ್ಲಿ ಇಂದು (ಶನಿವಾರ) ನಡೆದ ಎಫ್ ಗುಂಪಿನ ಪ್ರಾಥಮಿಕ ಪಂದ್ಯದಲ್ಲಿ ಭಾರತದ ಪುರುಷರು ತಜಕಿಸ್ತಾನವನ್ನು 3-0 ಗೋಲುಗಳಿಂದ ಸೋಲಿಸಿದರೆ, ಮಹಿಳೆಯರು ನೆರೆಯ ನೇಪಾಳವನ್ನು 3-0 ಅಂತರದಿಂದ ಸೋಲಿಸಿದರು. ಏಷ್ಯನ್ ಗೇಮ್ಸ್ನಲ್ಲಿ […]