ಕೋಟ: ಸುಗಂಧಿ ಮಕ್ಕಳ ಚಲನಚಿತ್ರ ಪ್ರದರ್ಶನ ಸಪ್ತಾಹ

ಕೋಟ: ವಿವೇಕ ಬಾಲಕಿಯರ ಫ್ರೌಢಶಾಲೆಯ ಆವರಣದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾದ ಮಕ್ಕಳ ದಿನಾಚರಣೆ ಅಂಗವಾಗಿ ಬೆಂಗಳೂರು ಅಂತರಾಷ್ಟೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡ ಕಾರಂತ ಜೀವನ ಪ್ರೇರಿತ ಮಕ್ಕಳ ಚಲನಚಿತ್ರ ಸುಗಂಧಿ ಇದರ ಉಚಿತ ಪ್ರದರ್ಶನ ಸಪ್ತಾಹ ಕಾರ್ಯಕ್ರಮವು ಸೋಮವಾರದಂದು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್, ಇಂದು ಎಲ್ಲ ಕ್ಷೇತ್ರಗಳಲ್ಲಿಯೂ ಮಹಿಳೆಯರು ಸಾಧನೆ ಮಾಡಿದ್ದಾರೆ ಎಂದರು. ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಮಾತನಾಡಿ, ಸುಗಂಧಿ ಚಲನಚಿತ್ರವು ಕಲೆಯಲ್ಲಿನ ಮೌಢ್ಯವನ್ನು ಎತ್ತಿ ಹಿಡಿಯುವಂತಿದೆ. ಚಿತ್ರವು ಯಶಸ್ವಿಯಾಗಿ […]

ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ

ಉಡುಪಿ: ಮಕ್ಕಳು ಪ್ರತೀ ದಿನ ತಮ್ಮ ಬಾಲ್ಯದ ಸಂಭ್ರಮವನ್ನು ಆನಂದಿಸುವಂತೆ ಅವರ ಹಕ್ಕುಗಳನ್ನು ದೊರಕಿಸಲು ಸೂಕ್ತ ವಾತಾವರಣವನ್ನು ನಿರ್ಮಾಣ ಮಾಡುವ ಮೂಲಕ ಜಿಲ್ಲೆಯನ್ನು ಮಕ್ಕಳ ಸ್ನೇಹಿ ಜಿಲ್ಲೆಯನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು. ಅವರು ಸೋಮವಾರದಂದು ಉಡುಪಿ ಬೋರ್ಡ್ ಹೈಸ್ಕೂಲ್‌ನಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲಕಾರ್ಮಿಕ ಯೋಜನಾ ಸಂಘ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ರೋಟರಿ […]

ಉಡುಪಿ ಎಕ್ಸ್ಪ್ರೆಸ್ ಅಮ್ಮ ವಿತ್ ಕಂದಮ್ಮ ಸೀಸನ್-3: ಬಹುಮಾನ ಗೆದ್ದ ಅಮ್ಮ-ಮಕ್ಕಳಿವರು!!

ಉಡುಪಿ: ವಸ್ತುನಿಷ್ಠ ವರದಿಗಾರಿಕೆಗೆ ಹೆಸರುವಾಸಿಯಾದ ನಿಮ್ಮ ಉಡುಪಿ ಎಕ್ಸ್ಪ್ರೆಸ್ ಕಳೆದ ಬಾರಿಯಂತೆಯೆ ಈ ಬಾರಿಯೂ ಮಕ್ಕಳ ದಿನಾಚರಣೆ ಪ್ರಯುಕ್ತ ಮುದ್ದು ಕಂದಮ್ಮಗಳ ಜೊತೆ ತಾಯಂದಿರ ಫೋಟೋ ಸ್ಪರ್ಧೆ “ಅಮ್ಮ ವಿದ್ ಕಂದಮ್ಮ-ಸೀಸನ್ 3” ಅನ್ನು ಏರ್ಪಡಿಸಿದ್ದು, ಇದಕ್ಕೆ ಓದುಗರಿಂದ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದ್ದು, ನೂರಾರು ಫೋಟೋಗಳು ಬಂದಿದ್ದವು. ಇದರಲ್ಲಿ ಅತ್ಯುತ್ತಮ ಗುಣಮಟ್ಟದ 25 ಫೋಟೋಗಳನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದು, ಅತಿ ಹೆಚ್ಚು ಲೈಕ್ ಪಡೆದ ಮೂರು ಫೋಟೋಗಳಿಗೆ ಬಹುಮಾನ ದೊರೆತಿದೆ. ಅತಿಹೆಚ್ಚು ಲೈಕ್ ಪಡೆದ […]

ಅಮ್ಮ ವಿದ್ ಕಂದಮ್ಮ3-ನಿಮ್ಮ ಮುದ್ದಾದ ಕಂದಮ್ಮನ ಜೊತೆ ನಿಮ್ಮ ಭಾವಚಿತ್ರವನ್ನು ನಮ್ಮ ಜೊತೆ ಹಂಚಿಕೊಳ್ಳಿ: ಆಕರ್ಷಕ ಬಹುಮಾನಗಳನ್ನು ಗೆಲ್ಲಿ

ಅಮ್ಮ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ಮಕ್ಕಳ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸುವ ಜೊತೆಗೆ ನಿಮ್ಮ ಮುದ್ದಾದ ಭಾವಚಿತ್ರಕ್ಕೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ!! ತಮ್ಮ ಮಕ್ಕಳ ಜೊತೆ ಅಮ್ಮಂದಿರಿಗೂ ಮಿಂಚಲು ಇರುವ ಸದವಕಾಶವನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಜೊತೆ ಇರುವ 6 ವರ್ಷದೊಳಗಿನ ನಿಮ್ಮ ಮುದ್ದು ಕಂದಮ್ಮನ ಫೋಟೋವನ್ನು UDUPIXPRESS.COM ಜೊತೆ ಹಂಚಿಕೊಳ್ಳಿ. ಅಮ್ಮ- ಮಗುವಿನ ಉತ್ತಮ ಗುಣಮಟ್ಟದ ಫೋಟೋಗಳನ್ನು [email protected] ಗೆ ಇ-ಮೇಲ್ ಮಾಡಿ. ಆಯ್ದ 25 ಫೋಟೋಗಳನ್ನು ನಾವು ನಮ್ಮ‌ udupixpress.com […]