ಅಮ್ಮ ವಿದ್ ಕಂದಮ್ಮ3-ನಿಮ್ಮ ಮುದ್ದಾದ ಕಂದಮ್ಮನ ಜೊತೆ ನಿಮ್ಮ ಭಾವಚಿತ್ರವನ್ನು ನಮ್ಮ ಜೊತೆ ಹಂಚಿಕೊಳ್ಳಿ: ಆಕರ್ಷಕ ಬಹುಮಾನಗಳನ್ನು ಗೆಲ್ಲಿ

ಅಮ್ಮ ಮತ್ತು ಮಗುವಿನ ಭಾವನಾತ್ಮಕ ಸಂಬಂಧವನ್ನು ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ಮಕ್ಕಳ ದಿನಾಚರಣೆಯನ್ನು ಅವಿಸ್ಮರಣೀಯಗೊಳಿಸುವ ಜೊತೆಗೆ ನಿಮ್ಮ ಮುದ್ದಾದ ಭಾವಚಿತ್ರಕ್ಕೆ ಆಕರ್ಷಕ ಬಹುಮಾನವನ್ನು ಗೆಲ್ಲುವ ಅವಕಾಶವನ್ನು ನಿಮ್ಮದಾಗಿಸಿಕೊಳ್ಳಿ!! ತಮ್ಮ ಮಕ್ಕಳ ಜೊತೆ ಅಮ್ಮಂದಿರಿಗೂ ಮಿಂಚಲು ಇರುವ ಸದವಕಾಶವನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಜೊತೆ ಇರುವ 6 ವರ್ಷದೊಳಗಿನ ನಿಮ್ಮ ಮುದ್ದು ಕಂದಮ್ಮನ ಫೋಟೋವನ್ನು UDUPIXPRESS.COM ಜೊತೆ ಹಂಚಿಕೊಳ್ಳಿ.

ಅಮ್ಮ- ಮಗುವಿನ ಉತ್ತಮ ಗುಣಮಟ್ಟದ ಫೋಟೋಗಳನ್ನು photoudupixpress@gmail.com ಗೆ ಇ-ಮೇಲ್ ಮಾಡಿ. ಆಯ್ದ 25 ಫೋಟೋಗಳನ್ನು ನಾವು ನಮ್ಮ‌ udupixpress.com ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸುತ್ತೇವೆ. ನಿಮ್ಮ ಫೋಟೋಗಳು ಅಪ್ಲೋಡ್ ಆಗಿದ್ದಲ್ಲಿ ನಮ್ಮ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ ನಿಮ್ಮ ಫೋಟೋಗಳನ್ನು ಸ್ನೇಹಿತರ ಜೊತೆ ಶೇರ್ ಮಾಡಿ ಅದಕ್ಕೆ ಹೆಚ್ಚಿನ ಲೈಕ್ಸ್ ಪಡೆಯಿರಿ.

ಅತೀ ಹೆಚ್ಚು ಲೈಕ್ ಪಡೆದ 3 ಫೋಟೋಗಳಿಗೆ ಆಕರ್ಷಕ ಬಹುಮಾನವಿದೆ. ಲೈಕ್ ಪಡೆಯದೆಯೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾದ 3 ಫೋಟೋಗಳಿಗೂ ಬಹುಮಾನವಿದೆ.

ನೀವು ಫೋಟೋವನ್ನು ಇ-ಮೇಲ್ ಮಾಡಲು ಕೊನೆಯ ದಿನ 09.11.2022. ಆಯ್ದ 25 ಫೋಟೋಗಳನ್ನು 12.11.2022 ರಂದು Udupixpress.com facebook ಪುಟದಲ್ಲಿ ಅಪ್ ಲೋಡ್ ಮಾಡುತ್ತೇವೆ. ಬಳಿಕ ನೀವು ನಿಮ್ಮ ಗ್ರೂಪ್ ಗಳಲ್ಲಿ ಅದನ್ನು ಶೇರ್ ಮಾಡಬಹುದು.

ಸ್ಪರ್ಧೆಯಲ್ಲಿ ಭಾಗವಹಿಸುವ ನಿಯಮಗಳು:

# ಅಮ್ಮನ ಜೊತೆ ಇರುವ 6 ವರ್ಷದೊಳಗಿನ ಮಗುವಿನ ಭಾವಚಿತ್ರ ಕಳಿಸಿಕೊಡಿ.

# ಇ- ಮೇಲ್ ನಲ್ಲಿ ಒಬ್ಬರು ಒಂದು ಫೋಟೋವನ್ನು ಮಾತ್ರ ಕಳಿಸಬೇಕು.

# ಇ-ಮೇಲ್ ಜೊತೆ ಅಮ್ಮ-ಮಗುವಿನ ಹೆಸರು, ಊರು, ವಿಳಾಸ ಹಾಗೂ ಸಂಪರ್ಕ ಸಂಖ್ಯೆ ನಮೂದಿಸಲೇಬೇಕು. ಇಲ್ಲದಿದ್ದರೆ ಸ್ಪರ್ಧೆಗೆ ಪರಿಗಣಿಸುವುದಿಲ್ಲ.

# ಸೆಲ್ಫಿ ಫೋಟೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.

# ಒಳ್ಳೆ ಗುಣಮಟ್ಟದ ಅಮ್ಮ-ಮಗು ಮಾತ್ರ‌ ಇರುವ ಚಿತ್ರಗಳನ್ನಷ್ಟೇ ಕಳಿಸಿ

# ಸ್ಪರ್ಧೆಯ ನಿಯಮ ಮತ್ತು ವಿಜೇತರ ಆಯ್ಕೆಯ ವಿಷಯದಲ್ಲಿ ನಮ್ಮ ತಂಡ ಗಂಭೀರತೆ ಮತ್ತು ಪಾರದರ್ಶಕತೆ ಕಾಪಾಡಿಕೊಳ್ಳುತ್ತದೆ.

ತಾಯಂದಿರೇ…. ತಡ ಮಾಡಬೇಡಿ ನಿಮ್ಮ ಮತ್ತು ನಿಮ್ಮ ಕಣ್ಣಿನ ಕಣ್ಮಣಿಯ ಚಂದದ ಫೋಟೋವನ್ನು ನಮಗೆ ಕಳಿಸಿಕೊಡಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿ…..