ಮಕ್ಕಳು ಸೇರಿದಂತೆ 14 ದಲಿತರನ್ನು ಬಂಧನದಲ್ಲಿಟ್ಟ ಕಾಫಿ ಎಸ್ಟೇಟ್ ಮಾಲೀಕರ ವಿರುದ್ದ ಪ್ರಕರಣ ದಾಖಲು
ಚಿಕ್ಕಮಗಳೂರು: ಇಲ್ಲಿನ ಹುಸನೇಹಳ್ಳಿಯಲ್ಲಿ ಕಾಫಿ ಎಸ್ಟೇಟ್ ಮಾಲೀಕರೊಬ್ಬರು ಹಣಕಾಸಿನ ವಿಚಾರದಲ್ಲಿ 14 ದಲಿತರನ್ನು ಥಳಿಸಿ ಒಂದು ದಿನದ ಮಟ್ಟಿಗೆ ಅವರೆಲ್ಲರನ್ನು ಬಂಧಿಸಿಟ್ಟಿದ ವಿಚಾರದಲ್ಲಿ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಕಾಫಿ ಎಸ್ಟೇಟ್ ಮಾಲೀಕ ಜಗದೀಶಗೌಡ ಮತ್ತು ಅವರ ಪುತ್ರ ತಿಲಕ್ ವಿರುದ್ಧ ಪೊಲೀಸರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳು ಮತ್ತು ಎಸ್‌ಸಿ-ಎಸ್‌ಟಿ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಗಾಯಗೊಂಡಿರುವ ಮಹಿಳೆಯೊಬ್ಬರು, ಸಂತ್ರಸ್ತರನ್ನು ಹೊಡೆಯುವ […]
ಶ್ರೀ ದೊಡ್ಡಮ್ಮದೇವಿ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ
ಚಿಕ್ಕಮಗಳೂರು: ಬುಧವಾರದಂದು ನಗರದ ದಂಟರಮಕ್ಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೊಡ್ಡಮ್ಮದೇವಿ ದೇವಾಲಯದ ಪ್ರವೇಶೋತ್ಸವ ಹಾಗೂ ಶಿಲಾಮೂರ್ತಿ ಪುನಃ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ನೂರಾರು ಗ್ರಾಮಸ್ಥರೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು. ಮಹೋತ್ಸವವು ಎರಡು ದಿನಗಳಿಂದ ಆಚರಿಸಲಾಗುತ್ತಿದ್ದು ಕೊನೆಯ ದಿನವಾದ ಇಂದು ಬೆಳಿಗ್ಗೆ 4 ರಿಂದ ಶ್ರೀ ದೊಡ್ಡಮ್ಮದೇವಿ ಶಿಲಾವಿಗ್ರಹ ಮತ್ತು ಪರಿವಾರ ದೇವತೆಗಳ ಪುನಃ ಪ್ರಾಣ ಪ್ರತಿಷ್ಟಾಪನಾ ಅಭಿಷೇಕ, ಹೋಮಾದಿಗಳು ನಡೆಯಿತು. ಬೆಳಿಗ್ಗೆ 10 ರಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಶಿಖರ ಕಳಸಾರೋಹಣ ನೆರವೇರಿಸಿದರು. ಅದಾದ ಬಳಿಕ ಪೂರ್ಣಾಹುತಿ, […]