ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್: ನವೀಕರಣಕ್ಕೆ ಸೂಚನೆ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕುಟುಂಬಗಳ ಸದಸ್ಯರಿಗೆ ನೀಡಲಾಗಿರುವ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡ್ನ್ನು ಪ್ರಸಕ್ತ ಸಾಲಿನಲ್ಲಿ ನವೀಕರಿಸಲಾಗುತ್ತಿದ್ದು, ಕಾರ್ಡ್ ಹೊಂದಿರುವ ಕುಟುಂಬದ ಯಾವುದಾದರೂ ಸದಸ್ಯರು, ತಮ್ಮ ಕುಟುಂಬದ ಎಲ್ಲಾ ಸದಸ್ಯರ ಬಗ್ಗೆ ಮುಚ್ಚಳಿಕೆ ಪತ್ರ ಹಾಗೂ ಹಳೆ ಆರೋಗ್ಯ ಕಾರ್ಡ್ ಪ್ರತಿಯೊಂದಿಗೆ ಆಗಸ್ಟ್ 15 ರ ಒಳಗೆ ಉಡುಪಿ ನಗರಸಭಾ ಕಚೇರಿಗೆ ಹಾಜರಾಗಿ ದಾಖಲೆಗಳನ್ನು ಸಲ್ಲಿಸಬಹುದಾಗಿದೆ. ದಾಖಲೆ ಸಲ್ಲಿಸಿದವರ ಕಾರ್ಡ್ಗಳನ್ನು ಮಾತ್ರ ನವೀಕರಿಸಲಾಗುವುದು ಎಂದು ನಗರಸಭೆ […]