‘ಮತದಾನ’-ಪತ್ರಿಕಾ ಛಾಯಾಗ್ರಾಹಕರಿಗಾಗಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ-2023 ರ ಮತದಾನದ ಹಬ್ಬವನ್ನು ಸ್ಮರಣೀಯವಾಗಿಸಲು ಕರ್ನಾಟಕ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ವತಿಯಿಂದ ಪತ್ರಿಕಾ ಹಾಗೂ ಹವ್ಯಾಸಿ ಛಾಯಾಗ್ರಾಹಕರಿಗಾಗಿ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ. ವಿಷಯ: ಮತದಾನ ಅರ್ಹತೆ: ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಹವ್ಯಾಸಿ ಪತ್ರಿಕಾ ಛಾಯಾಗ್ರಹಕರು ಬಹುಮಾನ: ಪ್ರಥಮ: 25,000/- ದ್ವಿತೀಯ: 15,000/- ತೃತೀಯ: 10,000/- ಸಮಾಧಾನಕರ: 6,000/- ವಿಶೇಷ: 5000/- ಛಾಯಾಚಿತ್ರಗಳನ್ನು ಸಲ್ಲಿಸಲು ಕೊನೆ ದಿನ: 20-05-2023, ಶನಿವಾರ ಸಂಜೆ 5 ಗಂಟೆ ವಿಳಾಸ: ktkceomedia2023@gmail.com

ವಿಧಾನಸಭಾ ಚುನಾವಣೆ: ಶೇಕಡಾವಾರು ಮತದಾನದಲ್ಲಿ ದಾಖಲೆ ಸೃಷ್ಟಿ; ಇದೇ ಮೊದಲ ಬಾರಿಗೆ 73.19% ಮತದಾನ

ಬೆಂಗಳೂರು: ಕರ್ನಾಟಕದಲ್ಲಿ ಬುಧವಾರ ನಡೆದ ವಿಧಾನಸಭಾ ಚುನಾವಣೆಗೆ ಸಾರ್ವಕಾಲಿಕ ಗರಿಷ್ಠ 73.19% ಮತದಾನವಾಗಿದ್ದು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ 85.56% ಮತದಾನವಾಗಿದೆ. ಬೆಂಗಳೂರಿನ ಬಿಬಿಎಂಪಿ ದಕ್ಷಿಣ ಜಿಲ್ಲೆಯಲ್ಲಿ 52.33% ದೊಂದಿಗೆ ಅತಿ ಕಡಿಮೆ ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಆದಾಗ್ಯೂ, ಇದು ತಾತ್ಕಾಲಿಕ ಅಂಕಿ ಅಂಶವಾಗಿದ್ದು, ಇದು ಅಂಚೆ ಮತದಾನವನ್ನು ಒಳಗೊಂಡಿಲ್ಲ ಎಂದು ಆಯೋಗ ತಿಳಿಸಿದೆ. 1957 ರ ಬಳಿಕ ಈ ಬಾರಿ ನಡೆದಿರುವ ಚುನಾವಣೆಯಲ್ಲಿ ಅತ್ಯಧಿಕ ಮತದಾನ ನಡೆದಿದೆ ಎನ್ನಲಾಗಿದೆ. ಈ ವರ್ಷ […]

ರಾಜ್ಯದಲ್ಲಿ ಅತಿ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆ: ಉಡುಪಿಗೆ ಪ್ರಥಮ ಸ್ಥಾನ

ಉಡುಪಿ: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ – 2023 ರ ಪರಿಷ್ಕೃತ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ರಾಜ್ಯದಲ್ಲಿ ಅತ್ಯಂತ ಹೆಚ್ಚು ಮಹಿಳಾ ಮತದಾರರಿರುವ ಜಿಲ್ಲೆಯಾಗಿ ಉಡುಪಿ ಮೊದಲ ಸ್ಥಾನದಲ್ಲಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಅತ್ಯಂತ ಕಡಿಮೆ ಮಹಿಳಾ ಮತದಾರರನ್ನು ಹೊಂದಿರುವ ಜಿಲ್ಲೆಯಾಗಿದೆ ಎಂದು ಮುಖ್ಯ ಚುನಾವಣಾ ಅಧಿಕಾರಿಯ ಕಚೇರಿ ತಿಳಿಸಿದೆ. ಉಡುಪಿಯಲ್ಲಿ 4,90,060 ಪುರುಷ ಮತದಾರರು ಹಾಗೂ 5,26,173 ಮಹಿಳಾ ಮತದಾರರಿದ್ದು ಒಟ್ಟು 10,16,245 ಮತದಾರರಿದ್ದಾರೆ. ಜಿಲ್ಲೆಯ ಲಿಂಗಾನುಪಾತ: 1074 ಬೆಂಗಳೂರು ಗ್ರಾಮಾಂತರದಲ್ಲಿ 14,90, 481 […]

ಮುಖ್ಯ ಚುನಾವಣಾ ಕಚೇರಿಯಿಂದ ಅರ್ಹ ಮತದಾರರ ಅಂತಿಮ ಪಟ್ಟಿಯ ಪಿಡಿಎಫ್ ಮಾದರಿ ಬಿಡುಗಡೆ: ನಿಮ್ಮ ಹೆಸರು ಪರೀಕ್ಷಿಸಿಕೊಳ್ಳಿ

ಮುಖ್ಯ ಚುನಾವಣಾ ಅಧಿಕಾರಿ ಕಚೇರಿಯು ಅರ್ಹ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ಇದರಲ್ಲಿ ಮತದಾರರು ತಮ್ಮ ಹೆಸರು ನೋಂದಾವಣೆಯಾಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. https://ceo.karnataka.gov.in ವೆಬ್ ಸೈಟ್ ನಲ್ಲಿ ಪಿಡಿಎಫ್ ಮಾದರಿಯಲ್ಲಿ ಮತದಾರರು ತಮ್ಮ ಹೆಸರು ಮುಂತಾದ ವಿವರಗಳು ಪರಿಶೀಲಿಸಬಹುದು. ಮೃತಪಟ್ಟ, ವಿಳಾಸ ಬದಲಿಸಿರುವ ಹಾಗೂ ಕೈಬಿಟ್ಟಿರುವ ಮತದಾರರ ಮಾಹಿತಿಯನ್ನು ಕಾರಣ ಸಮೇತ ಪ್ರಕಟಿಸಲಾಗಿದೆ ಎಂದು ಮುಖ್ಯ ಚುನಾವಣಾ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ. ನಿಮ್ಮ ವಿವರಗಳನ್ನು ಪರಿಶೀಲಿಸಿಕೊಳ್ಳಲು ಲಿಂಕ್ ಗೆ ಭೇಟಿ ನೀಡಿ https://ceo.karnataka.gov.in/FinalRoll_2023/ https://erms.karnataka.gov.in/2022_ADMS_AFTER_DRAFT/