ಮತ್ತೊಮ್ಮೆ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅನ್ನು ಚಕಿತಗೊಳಿಸಿದ ಭಾರತೀಯ ಗ್ರಾಂಡ್ ಮಾಸ್ಟರ್ ಪ್ರಜ್ಞಾನಂದ!
ದೆಹಲಿ: 16 ವರ್ಷದ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ರಮೇಶ್‌ಬಾಬು ಪ್ರಜ್ಞಾನಂದ ಮೂರು ತಿಂಗಳ ಅಂತರದಲ್ಲಿ ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಶುಕ್ರವಾರ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ರಾಪಿಡ್ ಚೆಸ್ ಪಂದ್ಯಾವಳಿಯಲ್ಲಿ ಮತ್ತೊಮ್ಮೆ ಸೋಲಿಸುವ ಮೂಲಕ ಚಕಿತಗೊಳಿಸಿದರು. ಶುಕ್ರವಾರ ನಡೆದ ಚೆಸ್ಸಬಲ್ ಮಾಸ್ಟರ್ಸ್ ಆನ್‌ಲೈನ್ ಕ್ಷಿಪ್ರ ಚೆಸ್ ಪಂದ್ಯಾವಳಿಯ 5 ನೇ ಸುತ್ತಿನಲ್ಲಿ ಇಬ್ಬರು ಆಟಗಾರರು ಮುಖಾಮುಖಿಯಾದರು. ಕಾರ್ಲ್‌ಸೆನ್‌ನಿಂದ ಒಂದು-ಚಲನೆಯ ಪ್ರಮಾದದ ನಂತರ ಭಾರತದ ಪೋರ ಆತನನ್ನು ನಾಕ್ ಔಟ್ ಸ್ಟೇಜ್ ನಲ್ಲಿ ಸೋಲಿಸಿದರು. ವಿಶ್ವ ಚಾಂಪಿಯನ್ ಮ್ಯಾಗ್ನಸ್ […]
ಚದುರಂಗದಾಟದಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್ ನನ್ನು ಸೋಲಿಸಿದ ಭಾರತೀಯ ಬಾಲಕ ಆರ್. ಪ್ರಗ್ನಾನಂದ
ಹದಿಹರೆಯದ ಭಾರತೀಯ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಗ್ನಾನಂದ, ಏರ್‌ಥಿಂಗ್ಸ್ ಮಾಸ್ಟರ್ಸ್ ಆನ್‌ಲೈನ್ ರಾಪಿಡ್ ಚೆಸ್ ಪಂದ್ಯಾವಳಿಯ ಎಂಟನೇ ಸುತ್ತಿನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸೆನ್ ಅವರನ್ನು ಸೋಲಿಸ್, ನಾರ್ವೇಜಿಯನ್ ಸೂಪರ್‌ಸ್ಟಾರ್ ವಿರುದ್ಧ ಜಯ ಸಾಧಿಸಿದ ದೇಶದ ಮೂರನೇ ಆಟಗಾರನೆಸಿಕೊಂಡನು. ಐದು ಬಾರಿಯ ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಮತ್ತು ಪಿ ಹರಿಕೃಷ್ಣ ಅವರ ಸಾಲಿಗೆ ಸೇರಿ ಮ್ಯಾಗ್ನಸ್ ಕಾರ್ಲ್‌ಸೆನ್ ನನ್ನು ಸೋಲಿಸಿದ ಭಾರತದ ಮೂರನೇ ಆಟಗಾರನೆನ್ನುವ ಕೀರ್ತಿಗೆ ಪ್ರಗ್ನಾನಂದ ಭಾಜನನಾದನು. ಕಾರ್ಲ್‌ಸೆನ್‌ರ ಸತತ ಮೂರು ಗೆಲುವಿನ […]