ನಾಲ್ಕು ಆರೋಗ್ಯಕರ ಚಿರತೆ ಮರಿಗಳಿಗೆ ಜನ್ಮವಿತ್ತ ನಮೀಬಿಯಾದಿಂದ ಬಂದ ಚಿರತೆ ಸೀಯಾಯ
ಭೋಪಾಲ್: ಭಾರತದ ಚಿರತೆಯ ಆಮದುಗಳ ತವರು ಮಧ್ಯಪ್ರದೇಶದಲ್ಲಿರುವ ಕುನೊ ರಾಷ್ಟ್ರೀಯ ಉದ್ಯಾನವನವು ಪ್ರಾಜೆಕ್ಟ್ ಚೀತಾದ ಭಾಗವಾಗಿ ತನ್ನ ಮೊದಲ ಮರಿ ಚಿರತೆಗಳನ್ನು ಸ್ವಾಗತಿಸಿದೆ. ಚಿರತೆಗಳ ಸಂರಕ್ಷಣೆ ಮತ್ತು ಮರುಪರಿಚಯ ಯೋಜನೆಯಲ್ಲಿ ತೊಡಗಿರುವ ಅಧಿಕಾರಿಗಳು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಚಿರತೆ ಮರಿಗಳ ಜನನವು ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ತಮ್ಮ ಹೊಸ ಪರಿಸರಕ್ಕೆ ಉತ್ತಮವಾಗಿ ಹೊಂದಿಕೊಳ್ಳುವ ಸಕಾರಾತ್ಮಕ ಸಂಕೇತವಾಗಿದೆ ಎಂದಿದ್ದಾರೆ. ಚಿರತೆಗಳ ಸ್ಥಳೀಯ ಅಳಿವಿನ ಏಳು ದಶಕಗಳ ನಂತರ, ಭಾರತವು ಸೆಪ್ಟೆಂಬರ್ 2022 ರಲ್ಲಿ ತನ್ನ ಮಧ್ಯಪ್ರದೇಶದ ಕಾಡಿನಲ್ಲಿ […]
ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳ ಬಿಡುಗಡೆ: ಚಿರತೆಗಳನ್ನು ನೋಡಲು ಇನ್ನೂ ಸ್ವಲ್ಪ ಕಾಯಬೇಕು ಎಂದ ಪ್ರಧಾನಿ
ನಮೀಬಿಯಾದಿಂದ ಸ್ಥಳಾಂತರಗೊಳಿಸಲಾದ 8 ಚಿರತೆಗಳನ್ನು ಶನಿವಾರದಂದು ಪ್ರಧಾನಿ ಮೋದಿ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆಗೊಳಿಸಿದರು. ಆ ಬಳಿಕ ದೇಶವನ್ನುದ್ದೇಶಿಸಿ ಮಾತನಾಡಿ, ಪ್ರಕೃತಿ ಮತ್ತು ಪರಿಸರವನ್ನು ರಕ್ಷಿಸಿದಾಗ ನಮ್ಮ ಭವಿಷ್ಯವೂ ಸುಭದ್ರವಾಗುತ್ತದೆ. ಬೆಳವಣಿಗೆ ಮತ್ತು ಸಮೃದ್ಧಿಯ ಮಾರ್ಗಗಳು ಸಹ ತೆರೆದುಕೊಳ್ಳುತ್ತವೆ. ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚಿರತೆಗಳು ಮತ್ತೆ ಓಡಾಡುವಾಗ ಹುಲ್ಲುಗಾವಲು ಪರಿಸರ ವ್ಯವಸ್ಥೆ ಮತ್ತೆ ಪುನಃಸ್ಥಾಪಿತವಾಗುತ್ತದೆ. ಜೈವಿಕ ವೈವಿಧ್ಯತೆ ಮತ್ತಷ್ಟು ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಇಲ್ಲಿ ಪರಿಸರ ಪ್ರವಾಸೋದ್ಯಮವೂ ಹೆಚ್ಚಾಗಲಿದೆ, ಇಲ್ಲಿ ಅಭಿವೃದ್ಧಿಯ ಹೊಸ ಸಾಧ್ಯತೆಗಳು ಹುಟ್ಟಿಕೊಳ್ಳುತ್ತವೆ, […]
ಬಿ747 ಜಂಬೋ ಜೆಟ್ ನಲ್ಲಿ ಭಾರತಕ್ಕೆ ಬರಲಿವೆ 8 ಚಿರತೆಗಳು: ವಿಮಾನದ ಮನಮೋಹಕ ಚಿತ್ರ ಹಂಚಿಕೊಂಡ ಅಧಿಕಾರಿಗಳು
ವಿಂಡ್‌ಹೋಕ್: ವಿಶೇಷ ವಿಮಾನವೊಂದು ನಮೀಬಿಯಾದಿಂದ ಭಾರತಕ್ಕೆ ಚಿರತೆಗಳನ್ನು ಕರೆತರುತ್ತಿರುವ ಸುಂದರ ಚಿತ್ರ ಕಣ್ಮುಂದೆ ಬಂದಿದೆ. ಇದರಲ್ಲಿ ಚಿರತೆಗಳ ಸುಂದರ ವರ್ಣಚಿತ್ರಗಳನ್ನು ಮಾಡಲಾಗಿದೆ. ವಿಮಾನಯಾನ ಸಂಸ್ಥೆಯು ಈ ವಿಮಾನಕ್ಕೆ 118 ಎನ್ನುವ ವಿಶೇಷ ಸಂಖ್ಯೆ ನೀಡಿದೆ. ಈ ಕಂಪನಿಯು ಇದೆ ಮೊದಲ ಬಾರಿಗೆ ಚಿರತೆಗಳನ್ನು ಸ್ಥಳಾಂತರಿಸುತ್ತಿದೆ. ಈ ದೊಡ್ಡ ವಿಮಾನದಲ್ಲಿ 8 ಚಿರತೆಗಳನ್ನು ಭಾರತಕ್ಕೆ ತರಲಾಗುವುದು. ಚಿರತೆಗಳನ್ನು ಭಾರತಕ್ಕೆ ತರಲು ವಿಶೇಷ ವಿಮಾನ ನಮೀಬಿಯಾಕ್ಕೆ ಆಗಮಿಸಿದ್ದು, ನಮೀಬಿಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ವಿಮಾನದ ಚಿತ್ರವನ್ನು ಟ್ವೀಟ್ ಮಾಡಿದೆ. A […]
ಭಾರತಕ್ಕೆ ಮರಳಲಿವೆ 1950 ರಲ್ಲಿ ಕಣ್ಮರೆಯಾದ ಚೀತಾಗಳು: ಸೆ.17 ರಂದು ಯೋಜನೆ ಬಿಡುಗಡೆ ಮಾಡಲಿರುವ ಪ್ರಧಾನಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಸೆ.17 ರಂದು ‘ಚೀತಾ ಮರು ಪರಿಚಯ’ ಯೋಜನೆಗೆ ಚಾಲನೆ ನೀಡಲಿದ್ದಾರೆ. ಒಡಿಶಾ ರಾಜಧಾನಿ ಭುವನೇಶ್ವರದಲ್ಲಿ ನಡೆಯುತ್ತಿರುವ ಮೃಗಾಲಯ ನಿರ್ದೇಶಕರ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಈ ವಿಷಯವನ್ನು ಬಹಿರಂಗಪಡಿಸಲಾಗಿದೆ. ಈ ಉದ್ದೇಶಕ್ಕಾಗಿ ನಮೀಬಿಯಾದಿಂದ ಚಿರತೆಯನ್ನು ತರಲಾಗುವುದು ಎಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಹೇಳಿದ್ದಾರೆ. 1950 ರ ದಶಕದಲ್ಲಿ ಭಾರತದಿಂದ ಕಣ್ಮರೆಯಾದ ನಂತರ ಚಿರತೆಯನ್ನು ಮರು-ಪರಿಚಯಿಸುತ್ತಿರುವುದು ಇದೇ ಮೊದಲು ಎಂದು […]