ಶಿವಾಜಿ ಮಹಾರಾಜರ ತತ್ವಾದರ್ಶ ಮೈಗೂಡಿಸಿಕೊಂಡು ಮುನ್ನಡೆದರೆ ಸಮಗ್ರ ಅಭಿವೃದ್ಧಿ ಸಾಧ್ಯ: ದಿನೇಶ್ ಸಿ. ನಾಯ್ಕ್

ಉಡುಪಿ: ರಾಷ್ಟ್ರಕಂಡ ಮೇರು ವ್ಯಕ್ತಿತ್ವದ ಶಿವಾಜಿ ಮಹಾರಾಜರ ಧೈರ್ಯ, ತತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜವನ್ನು ಮುನ್ನಡೆಸಿದಾಗ ಸಮಗ್ರ ಅಭಿವೃದ್ಧಿ ಸಾಧ್ಯ. ದೇಶದಲ್ಲಿ ಶಿವಾಜಿಯನ್ನು ಬೆಂಬಲಿಸುವ ಸಂಘಟನೆಗಳು ಇನ್ನಷ್ಟು ಬಲಿಷ್ಠವಾಗಬೇಕಿದೆ ಎಂದು ಉಡುಪಿಯ ಛತ್ರಪತಿ ಶಿವಾಜಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ನ್ಯಾಯವಾದಿ ದಿನೇಶ್ ಸಿ. ನಾಯ್ಕ್ ತಿಳಿಸಿದ್ದಾರೆ. ಉಡುಪಿ ಕೋರ್ಟ್ ರಸ್ತೆಯಲ್ಲಿರುವ ಛತ್ರಪತಿ ಶಿವಾಜಿ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಶನಿವಾರ ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ತಿಥಿಯಾನುಸರವಾಗಿ ಶಿವಾಜಿ ಜಯಂತಿ ಯನ್ನು ಆಚರಿಸಿ ಮಾತನಾಡಿದರು. ಈ ಸಂದರ್ಭ […]