ರಾಷ್ಟ್ರದ ಪ್ರಪ್ರಥಮ ಚಾಟ್‌ಬಾಟ್ ‘Krutrim AI’ ಪ್ರಾರಂಭಿಸಿದ ಓಲಾ ಮುಖ್ಯಸ್ಥ: 10 ಕ್ಕೂ ಹೆಚ್ಚು ಭಾರತೀಯ ಭಾಷೆಗಳಲ್ಲಿ ಲಭ್ಯ
ಹೊಸದಿಲ್ಲಿ: ಓಲಾ ಸಂಸ್ಥಾಪಕ ಭವಿಶ್ ಅಗರ್ವಾಲ್ ಸೋಮವಾರದಂದು ಭಾರತದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ‘Krutrim AI’ ಅನ್ನು ಪ್ರಾರಂಭಿಸಿದ್ದಾರೆ. ಓಪನ್‌ಎಐನ ಚಾಟ್‌ಜಿಪಿಟಿ (ChatGpt) ಮತ್ತು ಗೂಗಲ್‌ನ ಜೆಮಿನಿ(Gemini)ಗೆ ಪೈಪೋಟಿಯನ್ನು ನೀಡಲು Krutrim AI ಅನ್ನು ಅಭಿವೃದ್ದಿ ಪಡಿಸಲಾಗಿದೆ. AI ಚಾಟ್‌ಬಾಟ್ ಈಗ ಸಾರ್ವಜನಿಕ ಬೀಟಾ ವರ್ಷನ್ ನಲ್ಲಿ ಹೊರಹೊಮ್ಮುತ್ತಿದೆ. “ಭರವಸೆ ನೀಡಿದಂತೆ, ಇಂದು Krutrim AI ಸಾರ್ವಜನಿಕ ಬೀಟಾ ರೋಲ್‌ಔಟ್ ಅನ್ನು ಪ್ರಾರಂಭಿಸುತ್ತಿದೆ” ಎಂದು ಅಗರ್ವಾಲ್ X ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ನಮಗೆ, ನಮ್ಮ […]