ಹೊನಲು ಬೆಳಕು ಪಂದ್ಯಾಕೂಟದ ಮೂಲಕ ಶಾಲಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದ ಚಾಂಪಿಯನ್ ಟ್ರೋಫಿ 2019
ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸುವ ಮುಖೇನ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹೊನ್ನಾಳದ ಹಳೆ ವಿದ್ಯಾರ್ಥಿ ಸಂಘ ಯು.ಎ.ಇ ಘಟಕ ಹೊಸ ದಾಖಲೆಯನ್ನೆ ನಿರ್ಮಿಸಿದೆ. ಹೌದು ಜನವರಿ 24 ,2019 ರಂದು ಪ್ರಪ್ರಥಮ ಬಾರಿಗೆ ಅಲ್-ನಾಹದಾದ ದುಬೈ ಸ್ಕಾಲರ್ ಸ್ಕೂಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾದ್ದ ಚಾಂಪಿಯನ್ ಟ್ರೋಫಿ ಲೀಗ್ ಪಂದ್ಯಾಕೂಟ ಬಹಳ ಯಶಸ್ವಿಯೊಂದಿಗೆ ಮುಕ್ತಾಯಗೊಂಡಿತು. ಈ ಪಂದ್ಯಾಕೂಟದಲ್ಲಿ ಹೊನ್ನಾಳದ 5 ತಂಡಗಳು ಭಾಗವಹಿಸಿದ್ದವು. ಜಾಕೀರ್ ಬಿ.ಆರ್ ಮುಂದಾಳತ್ವದ ಹಾಗೂ ಅಯಾಜ್ ಖಾನ್ ನಾಯಕತ್ವದ ಹೊನ್ನಾಳ ಸೂಪರ್ ಕಿಂಗ್ಸ್, […]