ಮಂಗಳೂರು: ಸರ್ಕಾರಿ ಶಾಲಾ ಮಕ್ಕಳಿಗಾಗಿ ಚಾಮರ ಫೌಂಡೇಶನ್ ವತಿಯಿಂದ ಉಚಿತ ಬೇಸಿಗೆ ಶಿಬಿರ

ಮಂಗಳೂರು: ದಿ.ಯತೀಶ್ ವೈ ಶೆಟ್ಟಿ ನೆನಪಿನಲ್ಲಿ ಚಾಮರ ಫೌಂಡೇಶನ್(ರಿ) ನಡೆಸುವ ಆರು ದಿನಗಳ ಉಚಿತ ಬೇಸಿಗೆ ಶಿಬಿರ ಬೇಸಿಗೆಗೊಂದು ಚಾಮರ 2023 ಬೈಕಂಪಾಡಿಯ ಮೊಗವೀರ ಸಮುದಾಯ ಭವನದಲ್ಲಿ ಎಪ್ರಿಲ್ 11 ರಂದು ಆರಂಭಗೊಂಡಿತು. ಸರಳವಾಗಿ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಶಿಬಿರದ ಮಕ್ಕಳೇ ದೀಪ ಬೆಳಗುವುದರ ಮೂಲಕ ಆರಂಭಿಸಿದರು. ಮಿಥುನ್ ಶ್ರಿಯಂ, ರಾಜೀವ ಕಾಂಚನ್, ಶಿರಿಶ್ ಕುಮಾರ್ ಹಾಗು ರಚನಾ ಉಪಸ್ಥಿತರಿದ್ದರು. ಸುಮಾರು 130 ವಿದ್ಯಾರ್ಥಿಗಳು ಈ ಬೇಸಿಗೆ ಶಿಬಿರದ ಭಾಗವಹಿಸಿದ್ದು, ಈ ಬೇಸಿಗೆ ಶಿಬಿರವನ್ನು ವಿಶೇಷವಾಗಿ ಸುತ್ತಮುತ್ತಲಿನ […]