ಮಹಾರಾಷ್ಟ್ರದ ಲಾತೂರಿನಲ್ಲಿ 12 ನೇ ಶತಮಾನದ ಚಾಲುಕ್ಯ ಶಿಲಾಶಾಸನ ಪತ್ತೆ
ಲಾತೂರ್: ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ನಿಲಂಗಾ ತಾಲ್ಲೂಕಿನ ಕಾಸರ್ ಬಾಲ್ಕುಂದ ಗ್ರಾಮದಲ್ಲಿ 12 ನೇ ಶತಮಾನದ್ದೆನ್ನಲಾದ ಕಲ್ಯಾಣದ ಚಾಲುಕ್ಯರ ಕಾಲದ ಕನ್ನಡ ಲಿಪಿಯ ಶಿಲಾಸನವೊಂದು ಪತ್ತೆಯಾಗಿದೆ. 24 ಸಾಲುಗಳ ಶಾಸನವು ಹಳೆಗನ್ನಡದಲ್ಲಿದೆ. ಮಹಾರಾಷ್ಟ್ರದ ವಿದ್ಯುತ್ ಉಪ ಕೇಂದ್ರದ ನಿರ್ವಾಹಕ ಕೃಷ್ಣ ತ್ರಯಂಬಕ ಗುಡಡೆ ಎನ್ನುವವರು ಈ ಶಾಸನವನ್ನು ಪತ್ತೆಹಚ್ಚಿದ್ದಾರೆ. ಕೃಷ್ಣರವರು ಇದುವರೆಗೆ 10 ಶಿಲಾಸಾನಗಳನ್ನು ಪತ್ತೆ ಹಚ್ಚಿದ್ದು, ಇದರಲ್ಲಿ ಆರು ಕನ್ನಡ ಲಿಪಿಯಲ್ಲಿದ್ದರೆ, ಉಳಿದ ನಾಲ್ಕು ದೇವನಾಗರಿ ಲಿಪಿಯಲ್ಲಿದೆ. ಶಾಸನವು ಅದರ ಪ್ರತಿಷ್ಠಾಪನೆಯ ದಿನಾಂಕವನ್ನು ರೌದ್ರ ಸಂವತ್ಸರ […]